ವಿದೇಶ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸ್ಸಾದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : 12 ದಿನಗಳ ವಿದೇಶ ಪ್ರವಾಸ ಮುಗಿಸಿ ಸಿದ್ದರಾಮಯ್ಯ ಅವರು ಇಂದು‌ ಸ್ವದೇಶಕ್ಕೆ ವಾಪಸ್ಸಾದರು. ದುಬೈ ಮೂಲಕ ಸಿದ್ದರಾಮಯ್ಯ ಅವರು ಬೆಳಗ್ಗೆ 3ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ವಿದೇಶದಿಂದ ವಾಪಸ್ಸಾಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ವಿದೇಶ ಪ್ರವಾಸ ಚೆನ್ನಾಗಿತ್ತು, ‘ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಇಲ್ಲ, ಜಾರಕಿಹೊಳಿ ಬ್ರದರ್ಸ್ ಸಮಸ್ಯೆ ಬಗ್ಗೆ ಗೊತ್ತಿಲ್ಲ, ಶಾಸಕರಿರುವ ಸಂಪರ್ಕದಲ್ಲಿರುವ ವಿಚಾರವಾಗಿ ಯಡಿಯೂರಪ್ಪ ಸುಳ್ಳು ಹೇಳ್ತಾರೆ, ಅಗತ್ಯಬಿದ್ರೆ ಸಮನ್ವಯ ಸಮಿತಿ ಸಭೆ ಕರೆಯುತ್ತೇನೆ’ ಎಂದು ಸಿದ್ದರಾಮಯ್ಯ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ಹಾಗು ಗೋವಿಂದರಾಜು ಹಾಗು ಅವರ ಪುತ್ರ ವಿದೇಶ ಪ್ರವಾಸ ಮುಗಿಸಿಮುಂಜಾನೆ 3 ಗಂಟೆಗೆ ಎಮರೈಡ್ಸ್ ವಿಮಾನದಲ್ಲಿ ಬಂದ ಸಿದ್ದರಾಮಯ್ಯ ಬೆಂಗಳೂರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು.

 

Leave a Reply

Your email address will not be published.

Social Media Auto Publish Powered By : XYZScripts.com