ಬಿಜೆಪಿಯ ಹಣದ ಆಮಿಷಕ್ಕೆ ನಮ್ಮ ಶಾಸಕರು ಬಗ್ಗುವುದಿಲ್ಲ : ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ : ‘ ಸಮ್ಮಿಶ್ರ ಸರ್ಕಾರ ಕೆಡವಿದ್ರೆ ಬಿಜೆಪಿಗೆ ಎರಡು ಎಂ.ಪಿ. ಸೀಟು ಕೂಡ ಬರಲ್ಲ ‘ ಎಂದು ಚಿಕ್ಕಬಳ್ಳಾಫುರದ ಮುದ್ದೇನಹಳ್ಳಿಯಲ್ಲಿ ಡಾ.ಎಂ‌.ವೀರಪ್ಪ ಮೊಯಿಲಿ ಹೇಳಿಕೆ ನೀಡಿದ್ದಾರೆ. ‘ ಬಿಜೆಪಿಯ ಹಣದ ಆಮಿಷಕ್ಕೆ ನಮ್ಮ ಶಾಸಕರು ಬಗ್ಗಲ್ಲ. ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ ‘ ಎಂದಿದ್ದಾರೆ.

ಕೆಲವು ಮಾಫಿಯಾಗಳು ಸಮ್ಮಿಶ್ರ ಸರ್ಕಾರ ಬೀಳಿಸಲು ಯತ್ನ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ ಸ್ವತಃ ಮುಖ್ಯಮಂತ್ರಿ ಆರೋಪ ಮಾಡಿರೋದ್ರಲ್ಲಿ ಸತ್ಯಾಂಶ ಇರುತ್ತೆ. ಈ ಹಿಂದೆ ಆಪರೇಷನ್ ಕಮಲ ಮಾಡಿ ಬಿಜೆಪಿ ನಷ್ಟ ಸಂಭವಿಸಿದೆ.

ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ‘ ಜಾರಕಿಹೊಳಿ‌ ಒಬ್ಬರಲ್ಲಾ, ಮೀಡಿದನವರು ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಒಬ್ಬ ಜಾರಕಿಹೊಳಿ ಮತ್ತೊಬ್ಬರು ಈ ಪಕ್ಷ ಹಾಗೂ ಸರ್ಕಾರನ ಉರುಳಿಸಲು ಸಾಧ್ಯವಿಲ್ಲಾ ‘ ಎಂದಿದ್ದಾರೆ.

 

One thought on “ಬಿಜೆಪಿಯ ಹಣದ ಆಮಿಷಕ್ಕೆ ನಮ್ಮ ಶಾಸಕರು ಬಗ್ಗುವುದಿಲ್ಲ : ವೀರಪ್ಪ ಮೊಯ್ಲಿ

Leave a Reply

Your email address will not be published.