ಸೀರೆ ಉಟ್ಟು, ಬಿಂದಿ ಧರಿಸಿದ ಕ್ರಿಕೆಟಿಗ ಗೌತಮ್​ ಗಂಭೀರ್​..! ಇದರ ಹಿಂದಿನ ಗುಟ್ಟೇನು..?

ನವದೆಹಲಿ :  ಭಾರತದ ಅಂತಾರಾಷ್ಟ್ರೀಯ ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆ ಉಟ್ಟು, ಬಿಂದಿ ಧರಿಸಿ ಬಾರೀ ಸುದ್ದಿಯಲ್ಲಿದ್ದಾರೆ.  ಏನಪ್ಪ ಇದು ಗಂಭೀರ ಕ್ರಿಕೆಟ್​ ಆಡೋದು ಬಿಟ್ಟು ಸೀರೆ ಉಟ್ಟಕೊಂಡು ಇದ್ದಾರೆ, ಆದರೆ ಈ ಕಾರ್ಯದ ಹಿಂದೆ ಒಂದು ಒಳ್ಳೆಯ ಉದ್ದೇಶವಿಟ್ಟುಕೊಂಡು ಗಂಭೀರ್​ ಈ ಕೆಲಸ ಮಾಡಿದ್ದಾರೆ.

 

ನವದೆಹಲಿ ಮೂಲದ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟಿಗ ಗೌತಮ್ ಗಂಭೀರ್, ಭಾರತ ತಂಡ ಅಲ್ಲದೇ ದೆಹಲಿ, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಟೀಂ ಇಂಡಿಯಾ ಖ್ಯಾತಿ ಪಡೆದವರು. ಗೌತಮ್​ ಇತ್ತೀಚೆಗೆ ನಡೆದ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದರು. ಅದೇನು ವಿಶೇಷವಲ್ಲ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ ಗಂಭೀರ್​ ಸ್ವತಃ ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟುಕೊಂಡು ತೃತೀಯ ಲಿಂಗಿಗಳ ರೀತಿಯಲ್ಲಿ ತಯಾರಾಗಿದ್ದರು. ತೃತಿಯ ಲಿಂಗಿಗಳ ರೀತಿ ನಡೆದುಕೊಳ್ಳುವ ಮೂಲಕ ಗಂಭೀರ್​ ಮಂಗಳಮುಖಿ ಸಮುದಾಯದ ಸದಸ್ಯರನ್ನು ಎಲ್ಲರಂತೆ ಗೌರವಿಸಬೇಕು ಎಂಬ ಸಂದೇಶ ಸಾರಿ, ಮೆಚ್ಚುಗೆಗೆ ಪಾತ್ರರಾಗಿದ್ರು. ಇನ್ನು ಸೋಷಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ.

ಸಂಬಂಧಿತ ಚಿತ್ರ

ನವದೆಹಲಿಯಲ್ಲಿರುವ ಮಾಲ್ ಒಂದರಲ್ಲಿ ನಡೆದ ಈ ತೃತೀಯಲಿಂಗಿಗಳ ಹಬ್ಬದಲ್ಲಿ ನೂರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ಎಚ್‍ಐವಿ/ಏಡ್ಸ್ ಅಲೈನ್ಸ್ ಇಂಡಿಯಾ ಇದನ್ನು ಆಯೋಜಿಸಿತ್ತು. ಈ ವರ್ಷದ ಧ್ಯೇಯವಾಕ್ಯ “ಬಾರ್ನ್ ದಿಸ್ ವೇ” ಎಂದಾಗಿತ್ತು. ಇನ್ನು ಇತ್ತೀಚೆಗೆ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸಿ ಸೆಕ್ಷನ್ 377ರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ನೆನೆಯಬಹುದು.

 

Leave a Reply

Your email address will not be published.

Social Media Auto Publish Powered By : XYZScripts.com