ಜಾರಕಿಹೊಳಿ ವಿಷಯ ನನಗೆ ಯಾಕೆ ಕೇಳ್ತೀರಿ, ಅವ್ರನ್ನೇ ಕೇಳಿ : ಮಾಧ್ಯಮಗಳ ಮೇಲೆ ಎಚ್‍ಡಿಡಿ ಗರಂ

ಶಿವಮೊಗ್ಗದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದು ಮಾಧ್ಯಮಗಳ ಕೆಂಡ ಕಾರಿದ್ದಾರೆ. ‘ ಜಾರಕಿಹೊಳಿ ವಿಷಯ ನನಗೆ ಯಾಕೆ ಕೇಳ್ತಿರಿ, ಅವರಿಗೇ ಕೇಳಿದರೆ ಒಳ್ಳೆಯದು. ರಾಜ್ಯ, ದೇಶದಲ್ಲಿ ಇಂಪಾರ್ಟೆಟ್ ಇಷ್ಯುಗಳು ಇದ್ದಾವೆ. ಇವನ್ನು ಬಿಟ್ಟು ಜಾರಕಿಹೊಳಿ, ಪರಮೇಶ್ವರ ಅಂತ ವಿಷಯ ತಗೊಂಡು ಬೆಳಗ್ಗಿಂದ ಸಂಜೆವರೆಗೂ ಪ್ರಸಾರ ಮಾಡ್ತಿರಿ ‘ ಎಂದಿದ್ದಾರೆ.

‘ ಮೂರು ತಿಂಗಳಿಂದ ನೋಡ್ತಿದಿನಿ. ನಿಮಗೇ ಏನೂ ಕೆಲಸ ಇಲ್ಲ ಅಲ್ಲ. ರಾಜ್ಯದ ಸಮಸ್ಯೆ ಗಳ ಬಗ್ಗೆ, ಕುಮಾರಸ್ವಾಮಿ ಕೆಲಸದ ಬಗ್ಗೆ ನೀವು ಏನೂ ಹೇಳಲು ತಯಾರಿಲ್ಲ. ರೈತರ ಸಾಲ ಮನ್ನ, ಬಡವರ ಖಾಸಗಿ ಸಾಲ ಮನ್ನಾ ವಿಷಯ ಹೇಳಲು ನಿಮಗೆ ಸಮಾಧಾನವಿಲ್ಲ. ಕುಮಾರಸ್ವಾಮಿ ಸರ್ಕಾರ ಯಾವಾಗ ಹೋದೀತು ಅಂತ ಅಂತ ಲೆಕ್ಕಾಚಾರ ಮಾಡ್ತಿದಿರಿ. ಸರ್ಕಾರ ಹೋದಾಗ ಆನಂದ ಪಡಿ. ಕಳೆದ ಮೂರು ತಿಂಗಳಿಂದ ನೋಡ್ತಾ ಇದಿನಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com