ದಿಲ್ಲಿ ವಿವಿ ಚುನಾವಣೆಯಲ್ಲಿ ಮತಯಂತ್ರದ ಅಕ್ರಮ – ಎಬಿವಿಪಿ ಗೆಲುವು

ಮತಯಂತ್ರದ ದೋಷ ಈಗ ದೆಹಲಿ ಯುನಿವರ್ಸಿಟಿಯನ್ನೂ ತಲುಪಿದೆ. ದೆಹಲಿ ವಿವಿಯ ವಿದ್ಯಾರ್ಥಿ ಘಟಕದ (ಡಿಯುಎಸ್‌ಯು) ಚುನಾವಣೆಯ ಮತ ಎಣಿಕೆ ವೇಳೆ ಮತಯಂತ್ರ ದೋಷಪೂರಿತಗೊಂಡಿರುವುದು ಬೆಳಕಿಗೆ ಬಂದಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಚುನಾವಣೆಯಲ್ಲಿ ಬಹುತೇಕ ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಎಬಿವಿಪಿ ಗೆದ್ದುಕೊಂಡಿದೆ.

ಹಲವು ಮತಯಂತ್ರಗಳು ದೋಷಪೂರಿತಗೊಂಡಿದ್ದವು. ಹೀಗಾಗಿ ಎಣಿಕೆಯನ್ನೂ ತುಸು ಹೊತ್ತು ನಿಲ್ಲಿಸಲಾಗಿತ್ತು. ಈ ಹಂತದಲ್ಲಿ ಮತಎಣಿಕೆ ಕೇಂದ್ರದಲ್ಲೇ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಬೆಂಬಲಿಗರ ಮಧ್ಯೆ ಘರ್ಷಣೆ ನಡೆಯಿತು. ಚುನಾವಣಾ ಆಯೋಗಕ್ಕೂ ಎನ್‌ಎಸ್‌ಯುಐ ದೂರು ನೀಡಿದೆ.
ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿಯ ಗುಂಪು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಹುದ್ದೆಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ ಕಾರ್ಯದರ್ಶಿ ಹುದ್ದೆಯನ್ನು ಗೆದ್ದುಕೊಂಡಿದೆ.

ಈ ಮಧ್ಯೆ, ಕ್ಯಾಂಪಸ್ ಚುನಾವಣೆಗೆ ಇವಿಎಂಗಳನ್ನು ಚುನಾವಣಾ ಆಯೋಗ ನೀಡಿಲ್ಲ. ದೆಹಲಿ ಯುನಿವರ್ಸಿಟಿ ಖಾಸಗಿಯಾಗಿ ಯಂತ್ರಗಳನ್ನು ಖರೀದಿಸಿರಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com