ಮೋದಿ ಸೋಲಿಸುವ ಪಣ ತೊಟ್ಟ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್..

ಒಂದು ವರ್ಷ ಕಾಲ ಜೈಲಿನಲ್ಲಿದ್ದು ಹೊರಬಂದ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅಲಿಯಾಸ್ ರಾವಣ್ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಸೋಲಿಸುವ ಪಣ ತೊಟ್ಟಿದ್ದಾರೆ.

ಶಹರಾನ್ಪುರ ಜಾತಿ ಹಿಂಸಾಚಾರ ಪ್ರಕರಣದ ಸಂಬಂಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಆಜಾದ್ ಅಲಿಯಾಸ್ ರಾವಣ್‌ ಅವರನ್ನು 2017ರ ಜೂನ್‌ನಲ್ಲಿ ಬಂಧಿಸಲಾಗಿತ್ತು. ಶುಕ್ರವಾರ ಮುಂಜಾನೆಯಷ್ಟೇ ಆಜಾದ್ ಬಿಡುಗಡೆಗೊಂಡಿದ್ದರು. 2019ರ ಚುನಾವಣೆಯಲ್ಲಿ ದಲಿತ ಸಮುದಾಯದ ಮನಗೆಲ್ಲುವ ಬಿಜೆಪಿಯ ತಂತ್ರದ ಭಾಗವಾಗಿ ಉತ್ತರ ಪ್ರದೇಶ ಸರ್ಕಾರ ದಲಿತ ನಾಯಕರ ಬಿಡುಗಡೆಗೆ ಗುರುವಾರ ತೀರ್ಮಾನಿಸಿತು ಎಂದು ಮೂಲಗಳು ಹೇಳಿವೆ.

ಭೀಮ್ ಆರ್ಮಿ ಮುಖ್ಯಸ್ಥನನ್ನು ಅದ್ದೂರಿಯಾಗಿ ಸ್ವಾಗತಿಸಲು ಜೈಲಿನ ಹೊರಗಡೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಸುಕಿನ 3 ಗಂಟೆಯ ವೇಳೆಗೇ ಜನಸಮೂಹ ಜೈಲಿನ ಮುಂಭಾಗದಲ್ಲಿ ಜಮಾಯಿಸಿತ್ತು.

“ದಲಿತರು ತಮ್ಮ ಹಕ್ಕಿಗಾಗಿ ಹೋರಾಡಬೇಕು. ಇದಕ್ಕಾಗಿ ಬೀದಿಗಿಳಿದರೂ ಚಿಂತೆಯಿಲ್ಲ. ಸಂವಿಧಾನದಲ್ಲಿ ತಮಗೆ ನೀಡಿರುವುದನ್ನು ಪಡೆಯಲು ದಲಿತರು ಸಿದ್ಧರಾಗಿರಬೇಕು. ಬಿಜೆಪಿ ಸರ್ಕಾರವನ್ನು ಬುಡಮೇಲುಗೊಳಿಸಲು ಜನರಿಗೆ ಸಂದೇಶ ನೀಡುವುದನ್ನು ಮುಂದುವರಿಸುವೆ” ಎಂದು ಚಂದ್ರಶೇಖರ್ ಬಿಡುಗಡೆ ಬಳಿಕ ಹೇಳಿದ್ದಾರೆ.

2 thoughts on “ಮೋದಿ ಸೋಲಿಸುವ ಪಣ ತೊಟ್ಟ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್..

Leave a Reply

Your email address will not be published.

Social Media Auto Publish Powered By : XYZScripts.com