ಹಸುಗೂಸನ್ನು ತಿಪ್ಪೆಗೆ ಬಿಸಾಡಿ ಹೋದ ಪಾಪಿಗಳು : ಕಂದಮ್ಮನನ್ನು ರಕ್ಷಿಸಿದ ಗ್ರಾಮಸ್ಥರು..!

ಯಾದಗಿರಿ : ಹುಟ್ಟಿದ ಹಸುಗೂಸನ್ನು ಮುಳ್ಳುಗಂಟಿಯಲ್ಲಿ ಪಾಪಿಗಳು ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ವಂಕಸಂದ್ರ ಗ್ರಾಮದಲ್ಲಿ ನಡೆದಿದೆ.

ವಂಕಸಂದ್ರ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ಗ್ರಾಮಸ್ಥರು ಮುಳ್ಳುಗಂಟಿಯಲ್ಲಿ ಹಸುಗೂಸನ್ನು ನೋಡಿ ರಕ್ಷಿಸಿದ್ದಾರೆ.  ನಿನ್ನೆ ರಾತ್ರಿ ವೇಳೆ ಒಂದು ದಿನದ ಹಸುಗೂಸನ್ನ ಮುಳ್ಳುಗಂಟಿಯಲ್ಲಿ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ, ಹಸುಗೂಸನ್ನ ರಕ್ಷಸಿದ್ದ ಗ್ರಾಮಸ್ಥರು ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿಸಿ ಮನೆಯೊಂದರಲ್ಲಿ ಸೀರೆಯಿಂದ ತೊಟ್ಟಿಲು ಮಾಡಿ ಮಗುವನ್ನು ಹಾಕಿ ತೂಗಿ ಪೋಷಿಸಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.