ಇಂದಿನಿಂದ ’56ನೇ ಬೆಂಗಳೂರು ಗಣೇಶ ಉತ್ಸವ’ – ಇಲ್ಲಿದೆ ಕಾರ್ಯಕ್ರಮಗಳ ವಿವರ..

ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 13 ರಿಂದ 23 ರವರೆಗೆ 56ನೇ ‘ಬೆಂಗಳೂರು ಗಣೇಶ ಉತ್ಸವ’ ಜರುಗಲಿದೆ. ವಿದ್ಯಾರಣ್ಯ ಯುವಕ ಸಂಘದ ವತಿಯಿಂದ ಅದ್ದೂರಿಯಾಗಿ ಗಣೇಶನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ದೇಶದ ಹಲವು ಖ್ಯಾತನಾಮ ಸಂಗೀತ, ನೃತ್ಯ, ಹಾಸ್ಯ ಕಲಾವಿದರು ಆಗಮಿಸಿ ಜನತೆಯನ್ನು ರಂಜಿಸಲಿದ್ದಾರೆ. ಏನು ಕಾರ್ಯಕ್ರಮ..? ಯಾವ ಕಲಾವಿದರು ಆಗಮಿಸಲಿದ್ದಾರೆ..? ಎಲ್ಲಿ..? ಎಷ್ಟು ಗಂಟೆಗೆ..? ಇಲ್ಲಿದೆ ವಿವರ.

ದಿನಾಂಕ 13 ರಿಂದ 18 ಸೆಪ್ಟೆಂಬರ್ ವರೆಗಿನ ಎಲ್ಲ ಕಾರ್ಯಕ್ರಮಗಳು ಬಸವನಗುಡಿಯ ಎಪಿಎಸ್ ಕಾಲೇಜು ಆವರಣದಲ್ಲಿ ನಡೆಯಲಿವೆ.

ಸೆಪ್ಟೆಂಬರ್ 13, ಗುರುವಾರ : ಸಾಯಂಕಾಲ 5 ಗಂಟೆಗೆ ಭರತನಾಟ್ಯ ಪ್ರದರ್ಶನ – ಶ್ರೀಮತಿ ಗಾಯತ್ರಿ ಮೈಯಾ ಹಾಗೂ ಕುಮಾರಿ ಪವಿತ್ರಾ ಮಂಜುನಾಥ್

Image may contain: 2 people, people smiling

ಸಾಯಂಕಾಲ 7 ಗಂಟೆಗೆ ‘ಸಂಧ್ಯಾರಾಗ’ – ಶಾಸ್ತ್ರೀಯ ಸಂಗೀತಾಧಾರಿತ ಕನ್ನಡ ಚಲನಚಿತ್ರ ಗೀತೆಗಳ ಗಾಯನ – ವಿದುಶಿ ಆರ್. ರಮಾ, ವಿಧ್ವಾನ್ ಆನೂರು ಅನಂತಕೃಷ್ಣ ಶರ್ಮ, ವಿದ್ವಾನ್ ಎಸ್. ಶಂಕರ್ ಹಾಗೂ ಇತರ ಕಲಾವಿದರು.

Image may contain: 10 people, people smiling

ಸೆಪ್ಟೆಂಬರ್ 14, ಶುಕ್ರವಾರ : ಸಾಯಂಕಾಲ 5 ಗಂಟೆಗೆ ‘ಚಿಣ್ಣರ ಶಾಸ್ತ್ರೀಯ ಗಾಯನ’ – ಕುಮಾರಿ ಅನನ್ಯಾ ಅನಿಲ್ ಹಾಗೂ ಕುಮಾರಿ ಅನ್ವಿತಾ ಬಂಗಾರಡ್ಕ.

Image may contain: 2 people, people smiling

ಸಾಯಂಕಾಲ 7 ಗಂಟೆಗೆ – ‘ಟ್ರಿಬ್ಯೂಟ್ ಟು ದ ಸಿಂಗರ್ ವಿತ್ ಗೋಲ್ಡನ್ ವಾಯ್ಸ್’ – ‘ಪಿ.ಬಿ ಶ್ರೀನಿವಾಸ್’ – ರಘು ಎಚ್.ಕೆ, ಮಯೂರ್ ರಾಘವೇಂದ್ರ, ಸಂಚಿತ್ ಹೆಗಡೆ, ಮೆಹಬೂಬ್, ಜ್ಞಾನೇಶ್.

Image may contain: 6 people, people smiling, text

ಸೆಪ್ಟೆಂಬರ್ 15, ಶನಿವಾರ : ಸಾಯಂಕಾಲ 5 ಗಂಟೆಗೆ – ಭರತನಾಟ್ಯ – ಕುಮಾರಿ ಕಿರಣ್ ಕಾಮತ್.

Image may contain: 1 person

ಸಾಯಂಕಾಲ 7 ಗಂಟೆಗೆ – ‘ರಾಗ ರಂಜಿನಿ’ – ಶಾಸ್ತ್ರೀಯ ಸಂಗೀತ ಜುಗಲ್ಬಂದಿ ಹಾಗೂ ಫ್ಯೂಷನ್ – ಪಂಡಿತ್ ಪ್ರವೀಣ್ ಗೋಡ್ಖಿಂಡಿ ಹಾಗೂ ಪಂಡಿತ್ ಜಯತೀರ್ಥ ಮೇವುಂಡಿ.

Image may contain: 6 people, people smiling, text

ಸೆಪ್ಟೆಂಬರ್ 16, ರವಿವಾರ : ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ – ಪುರಂದರ ಆರಾಧನಾ ಮಹೋತ್ಸವ – ನಿರಂತರ 12 ಗಂಟೆಗಳ ಕಾಲ ಪುರಂದರ ದಾಸರ ಕೃತಿಗಳ ಗಾಯನ.

Image may contain: 12 people, people smiling

ಸೆಪ್ಟೆಂಬರ್ 17, ಸೋಮವಾರ : ಸಾಯಂಕಾಲ 5 ಗಂಟೆಗೆ – ಭರತನಾಟ್ಯ – ಕುಮಾರಿ ಶ್ರೀಮಾ ಉಪಾಧ್ಯಾಯ.

Image may contain: 1 person

ಸಾಯಂಕಾಲ 7 ಗಂಟೆಗೆ – ‘ ಎ ಟ್ರಿಬ್ಯೂಟ್ ಟು ಆರ್.ಡಿ ಬರ್ಮನ್ – ಅರುಣ್ ಕುಮಾರ್, ಎಮ್.ಡಿ ಪಲ್ಲವಿ, ಮಾಳವಿಕಾ ಸುಂದರ್, ಅಲೋಕ್, ಆದಿತ್ಯ ವಿಟ್ಟಲ್ ಹಾಗೂ ಕಿಶೋರ್ ಸೋಧಾ.

Image may contain: 8 people, people smiling, text

ಸೆಪ್ಟೆಂಬರ್ 18, ಮಂಗಳವಾರ : ಸಾಯಂಕಾಲ 5 ಗಂಟೆಗೆ – ಕೊಳಲು ವಾದನ – ರಾಕೇಶ್ ದತ್ ಎಚ್.ಕೆ.

Image may contain: 1 person

ಸಾಯಂಕಾಲ 7 ಗಂಟೆಗೆ – ಹಾಸ್ಯ ಸಂಜೆ – ಮಿಮಿಕ್ರಿ ದಯಾನಂದ್ ಹಾಗೂ ಪ್ರೊಫೆಸರ್ ಕೃಷ್ಣೇಗೌಡ.

ಶಾಡೋ ಆ್ಯಕ್ಟ್ ಹಾಗೂ ಮ್ಯಾಜಿಕ್ ಷೋ – ಪ್ರಹ್ಲಾದ್ ಆಚಾರ್ಯ.

————-***————

ಸೆಪ್ಟೆಂಬರ್ 19 ರಿಂದ 23 ರವರೆಗಿನ ಎಲ್ಲ ಕಾರ್ಯಕ್ರಮಗಳೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಸೆಪ್ಟೆಂಬರ್ 19, ಬುಧವಾರ – ಸಾಯಂಕಾಲ 5 ಗಂಟೆಗೆ – ಭಕ್ತಿಗೀತೆಗಳು – ಯಶಸ್ವಿನಿ ನಾದಲಹರಿ ಹಾಗೂ ತಂಡ.

Image may contain: one or more people

ಸಾಯಂಕಾಲ 7 ಗಂಟೆಗೆ – ಸಂಗೀತ ಸಂಜೆ – ಪದ್ಮಭೂಷಣ ಶ್ರೀ ಎಸ್.ಪಿ ಬಾಲಸುಬ್ರಮಣ್ಯಮ್.

Image may contain: 4 people, people smiling, text

ಸೆಪ್ಟೆಂಬರ್ 20, ಗುರುವಾರ – ಸಾಯಂಕಾಲ 5 ಗಂಟೆಗೆ – ಭಕ್ತಿಗೀತೆಗಳು – ವಿದುಷಿ ಶ್ರೀಮತಿ ಶಾಂತಾಸ್ವಾಮಿ ಹಾಗೂ ತಂಡದವರಿಂದ.

Image may contain: indoor

ಸಾಯಂಕಾಲ 7 ಗಂಟೆಗೆ – ರಂಗೋತ್ಸವ ಮತ್ತು ಚೋರಚರಣದಾಸ – ಬಿ. ಜಯಶ್ರೀ ಅವರಿಂದ ರಂಗಗೀತೆಗಳು, ಮಂಡ್ಯ ರಮೇಶ ನಿರ್ದೇಶನದ ನಾಟಕ ಪ್ರದರ್ಶನ.

Image may contain: 2 people, people smiling, text

ಸೆಪ್ಟೆಂಬರ್ 21, ಶುಕ್ರವಾರ – ಸಾಯಂಕಾಲ 5 ಗಂಟೆಗೆ – ನೃತ್ಯಮಾಲೆ – ಅನರ್ಘ್ಯಾ ಪ್ರಶಾಂತ್ ಹಾಗೂ ತಂಡದವರಿಂದ ಭರತನಾಟ್ಯ ಪ್ರದರ್ಶನ.

Image may contain: 3 people, people smiling

ಸಾಯಂಕಾಲ 7 ಗಂಟೆಗೆ – ಸಂಗೀತ ಸಂಜೆ – ಬಾಲಿವುಡ್ ನಟ ರಿಷಿ ಕಪೂರ್ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಂವಾದ.

Image may contain: 6 people, people smiling, text

ಸೆಪ್ಟೆಂಬರ್ 22, ಶನಿವಾರ – ಸಾಯಂಕಾಲ 5 ಗಂಟೆಗೆ ಭರತನಾಟ್ಯ – ಹಸ್ಮಿತಾ ಗಣೇಶ್ ಅವರಿಂದ.

Image may contain: 1 person

ಸಾಯಂಕಾಲ 7 ಗಂಟೆಗೆ – ಸಂಗೀತ ಸಂಜೆ – ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಹಿಂದಿ ಹಾಗೂ ಕನ್ನಡ ಚಲನಚಿತ್ರ ಗೀತೆಗಳು.

Image may contain: 1 person, smiling, text

ಸೆಪ್ಟೆಂಬರ್ 23, ರವಿವಾರ – ಸಾಯಂಕಾಲ 5 ಗಂಟೆಗೆ – ಬೀಟ್ ಗುರೂ’ಸ್ ತಂಡದವರಿಂದ ಪರ್ಕ್ಯೂಷನ್ ಎನ್ಸೆಂಬಲ್.

No automatic alt text available.

ಸಾಯಂಕಾಲ 7 ಗಂಟೆಗೆ – ಸಂಗೀತ ಸಂಜೆ – ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ತಂಡದವರಿಂದ ಚಲನಚಿತ್ರ ಗೀತೆಗಳು.

Image may contain: 1 person, smiling, text

 

Leave a Reply

Your email address will not be published.

Social Media Auto Publish Powered By : XYZScripts.com