ಏಷ್ಯಾಕಪ್ 2018 – ದುಬೈಗೆ ಹಾರಿದ ಟೀಮ್ ಇಂಡಿಯಾ ಪ್ಲೇಯರ್ಸ್ – ತಂಡ ಸೇರಿಕೊಂಡ ಧೋನಿ

ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯ ವಹಿಸಿರುವ ಏಷ್ಯಾಕಪ್ 2018 ಟೂರ್ನಿ ಸೆಪ್ಟೆಂಬರ್ 15, ಶನಿವಾರದಿಂದ ಆರಂಭಗೊಳ್ಳಲಿದೆ. ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದೆನಿಸಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಗುರುವಾರ ದುಬೈಗೆ ಪ್ರಯಾಣ ಬೆಳೆಸಿದೆ.

ಮೊದಲ ಗುಂಪಿನಲ್ಲಿ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಯಜುವೇಂದ್ರ ಸಿಂಗ್ ಚಹಲ್, ಕುಲದೀಪ್ ಯಾದವ್, ಕೇದಾರ್ ಜಾಧವ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ತೆರಳಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಏಕದಿನ ತಂಡವನ್ನು ಕೂಡಿಕೊಂಡಿದ್ದಾರೆ. ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ವಿಮಾನದಲ್ಲಿ ಧೋನಿಯವರೊಂದಿಗಿನ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ.

ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಸಿಂಗ್ ಚಹಲ್ ವಿಮಾನದಲ್ಲಿ ಸಹ ಆಟಗಾರರೊಂದಿನ ಕ್ಲಿಕ್ಕಿಸಿದ ಚಿತ್ರವೊಂದನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಭಾರತ, ಸೆಪ್ಟೆಂಬರ್ 18 ರಂದು ಹಾಂಕಾಂಗ್ ಹಾಗೂ 19 ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Leave a Reply

Your email address will not be published.

Social Media Auto Publish Powered By : XYZScripts.com