ವಿಜಯಪುರ : ಬರ್ತ್ ಡೇ ಆಚರಣೆಯ ವೇಳೆ ಕೇಕ್ ಪಕ್ಕ ತಲ್ವಾರ್ ಇಟ್ಟ ರೌಡಿ ಶೀಟರ್..!

ವಿಜಯಪುರ‌ : ರೌಡಿ ಶೀಟರ್ ಒಬ್ಬಾತ ತನ್ನ ಜನ್ಮ‌ ದಿನಾಚರಣೆಯಲ್ಲಿ‌ ಕೇಕ್ ಪಕ್ಕದಲ್ಲಿ ತಲ್ವಾರ್ ಇಟ್ಟಿರುವ ಘಟನೆ ಕಳೆದ ಕೆಲ‌ ದಿನಗಳ ಹಿಂದೆ‌ ನಡೆದಿದೆ. ರೌಡಿ ಶೀಟರ್ ತನ್ವೀರ್ ಶಾನವಾಲೆ ಎಂಬಾತನ ಹುಟ್ಟುಹಬ್ಬದ ಆಚರಣೆ ವೇಳೆ ನಡೆದಿರುವ ಘಟನೆ ಬೆಳಕಿಗೆ ತಡವಾಗಿ ಬಂದಿದೆ.

ತನ್ವೀರ್ ಶಾನವಾಲೆ ಮೇಲೆ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ರೌಡಿ ಪರೇಡ್ ನಡೆಸಿದ್ದ ವೇಳೆ ಐಜಿಪಿ ಅಲೊಕಕುಮಾರ ತನ್ವೀರ್ ಗೆ ಶಿಸ್ತಿನಿಂದ ಇರಬೇಕೆಂದು‌ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಸಹ ತನ್ವೀರ್ ತನ್ನ ಜನ್ಮದಿನಾಚರಣೆ ವೇಳೆ ಕೇಕ್ ಪಕ್ಕ ತಲ್ವಾರ್ ಇಟ್ಡಿದ್ದು ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com