‘ಶಿವರಾಜ್​ ತಂಗಡಗಿ ಒಬ್ಬ ಕೊಲೆಗಡುಕ, ಅವನ ಬಗ್ಗೆ ಪ್ರತಿಕ್ರಿಯೆ ನೀಡುವುದು ವೇಸ್ಟ್’​ : ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ : ‘ಶಿವರಾಜ್​ ತಂಗಡಗಿ ಒಬ್ಬ ಕೊಲೆಗಡುಕ,  ಇವನ ಬಗ್ಗೆ ಪ್ರತಿಕ್ರಿಯೆ ನೀಡುವುದು ವೆಸ್ಟ್’ ಎಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್​ ಜೋಶಿ  ಹೇಳಿಕೆ ನೀಡಿದ್ರು.

ನರೇಂದ್ರ ಮೋದಿ ಬಗ್ಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್​ ಜೋಶಿ, ‘ಶಿವರಾಜ್ ತಂಗಡಗಿ ಒಬ್ಬ ಕೊಲೆಗಡುಕ – ಅವನ ಬಗ್ಗೆ ಹೇಳುವುದು ಏನು, ಪ್ರಧಾನಿ ನರೇಂದ್ರ ಮೋದಿ ಹಿಂಬಾಲಿಸುವವರು ದೇಶ ಬಿಟ್ಟು ಹೋಗಲಿ, ಶಿವರಾಜ್ ತಂಗಡಗಿ ಬಗ್ಗೆ ಪ್ರತಿಕ್ರಿಯೆ ನೀಡುವುದೇ ವೆಸ್ಟ’ ಎಂದು ಪ್ರಹ್ಲಾದ್​ ಜೋಶಿ  ತಗಡಗಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಪ್ರತಿಭಟನೆ ಮಾಡುವುದು ಸರಿಯಲ್ಲ, ದುರುದ್ದೇಶ ಪೂರ್ವಕ ಪ್ರತಿಭಟನೆ ಮಾಡುವವರಿಗೆ ಮಾನ ಮರ್ಯಾದೆ ಇಲ್ಲ. ಪದೇ ಪದೇ ನನ್ನನ್ನೇ ಟಾರ್ಗೆಟ್​ ಮಾಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಕ್ಕೆ ನಮ್ಮ ಕಾರ್ಯಕರ್ತರು ದೂರು ನೀಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಹಾಗೂ ನಾಚಿಕೆ ಇಲ್ಲಾ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಒತ್ತಡ ಹೇರಿ ಎಫ್ ಐಆರ್ ದಾಖಲು ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಈ ರೀತಿಯ ಪ್ರತಿಭಟನೆಗೆ ನಾವು ಹೆದರುವುದಿಲ್ಲ’ ಎಂದು ಪ್ರಹ್ಲಾದ್​ ಜೋಶಿ ತಿಳಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com