ರಿಯಾಯಿತಿ ದರದ ರೇಷ್ಮೆ ಸೀರೆಯಲ್ಲಿ ಗೋಲ್ ಮಾಲ್ :​ ಸೀರೆಗಾಗಿ ಮಹಿಳೆಯರ ಕಿತ್ತಾಟ.!

ದಾವಣಗೆರೆ : ಗೌರಿ ಗಣೇಶ್​ ಹ್ಬಬದ ಪ್ರಯುಕ್ತ ಸರ್ಕಾರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಯನ್ನು ರಾಜ್ಯದ ಐದು ಕಡೆ ಮಾರಾಟ ಮಳಿಗೆ ತೆರೆದು ಸೀರೆ ನೀಡುತ್ತಿದೆ.  ಆದರೆ ದಾವಣಗೆರೆಯ ಮಳಿಗೆಯಲ್ಲಿ ಗೋಲ್​ ಮಾಲ್​ ನಡೆದಿದೆ ಎಂದು ಮಹಿಳೆಯರು ಆರೋಪಿಸಿದ್ರು.

ನಿನ್ನೆ ರಾಜ್ಯದಲ್ಲಿ ಐದು ಕಡೆ ರಿಯಾಯಿತಿ ದರದಲ್ಲಿ ಮಾರಾಟ ಮಳಿಗೆ ತೆರೆದಿದ್ದರು. ಕೆಎಸ್ಐಸಿ ಯಿಂದ ಮಾರಾಟ ಮಳಿಗೆ ಪ್ರಾರಂಭ ವಾಗಿತ್ತು, ಆದ್ರೆ ದಾವಣಗೆರೆಯ ರೋಟರಿ ಭವನದಲ್ಲಿ ತೆರೆದ ಮಾರಾಟ ಮಳಿಗೆಯಲ್ಲಿ  500 ಸೀರೆಗಳನ್ನು ವಿತರಣೆ ಮಾಡುವ ಅದೇಶ ಬಂದಿತ್ತು, ಆದರೆ ಕೇವಲ 127 ಸೀರೆಗಳನ್ನು ವಿತರಣೆ ಮಾಡಿದ್ದು, ಬೆಳಿಗ್ಗೆ ಮಾರಾಟ ಮಳಿಗೆ ಮುಂದೆ ಮಹಿಳೆಯರು ಬಂದು ಜಗಳವಾಡಿದ್ದಾರೆ.

ಆದಾರ್ ಕಾರ್ಡ್ ಜೆರಾಕ್ಸ್ ಪಡೆದು ಸೀರೆಗಳನ್ನು ಲಾಟರಿ ಮೂಲಕ ವಿತರಿಸಲಾಗುತ್ತಿದ್ದು, ಆದರು ಕೇವಲ 127 ಸೀರೆ ವಿತರಿಸಿ ಆಫರ್ ಕ್ಲೋಸ್​ ಆಗಿದೆ ಎಂದು  ಕೆಎಸ್ಐಸಿ ಸಿಬ್ಬಂದಿ  ಹೇಳಿದ್ರು ಆದರೆ ಮಹಿಳೆಯರು ಸೀರೆ ವಿತರಿಸುವಂತೆ ಒತ್ತಾಯಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com