‘ಖರ್ಗೆ ನಮ್ಮ ರಾಜಕೀಯ ಗುರುಗಳು ಅವರು ಹೇಳಿದಂತೆ ನಾವು ಕೇಳುತ್ತೇವೆ’ : ರಮೇಶ್​ ಜಾರಕಿಹೊಳಿ

ಬೆಂಗಳೂರು : ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗೆ ಸಿಲುಕಿರುವ ಜಾರಕಿಹೊಳಿ ಬ್ರದರ್ಸ್, ಈಗಾಗಲೇ ನಾವು  ಬಿಜೆಪಿ ಸೇರ್ಪಡೆಗೊಳ್ಳುತ್ತೇವೆ ಎಂಬ ಊಹಾಪೂಹಗಳನ್ನು ತಳ್ಳಿ ಹಾಕಿದ್ರು.  ಆದರೂ ನಿಲ್ಲದ ಈ ವಿಷಯದ ಬಗ್ಗೆ ರಮೇಶ್​ ಜಾರಕಿಹೊಳಿ ಗುರುಗಳ ವಿಚಾರವನ್ನು ಹೇಳಿ ಅಂತಿಮ ಹಾಡಿದ್ದಾರೆ.

ಹೌದು, ಜಾರಕಿಹೊಳಿ ಸಹೋದರರಿಗೆ ರಾಜಕಿಯ ಗುರುಗಳಿದ್ದಾರಂತೆ ಇದನ್ನು ಸ್ವತಃ ರಮೇಶ್​ ಜಾರಕಿಹೊಳಿ ಹೇಳಿಕೊಂಡಿದ್ದು, ‘ಖರ್ಗೆ ನಮಗೆ ತಂದೆ ಸಮಾನ, ಅವರು ನಮಗೆ ರಾಜಕೀಯ ಗುರುಗಳು. ಅವರು ಹೇಳಿದಂತೆ ಕೇಳ್ತೇವೆ. ಈಗ ಅವರನ್ನ ಭೇಟಿಯಾಗಲು ತೆರಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಇನ್ನು ಇದರ ಜೊತೆಗೆ ನಿನ್ನೆ ಹಲವು ಕೈ ನಾಯಕರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದರು, ಇದೀಗ ಕಾಂಗ್ರೆಸ್ ನ ಐವರು ಶಾಸಕರು ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಕಾಂಗ್ರೆಸ್ ಶಾಸಕರಾದ ಕೆ.ಸುಧಾಕರ್, ಎಂಟಿಬಿ ನಾಗರಾಜ್, ಸುಬ್ಬಾರೆಡ್ಡಿ ಮತ್ತು ಪಕ್ಷೇತರ ಶಾಸಕ ನಾಗೇಶ್ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.