ವದಂತಿಗಳಿಗೆ ಬ್ರೇಕ್​ ಹಾಕಲು ಸೋಷಿಯಲ್​ ಮೀಡಿಯಾಗೆ ರಕ್ಷಿತ್​ ರೀ ಎಂಟ್ರಿ : ಸಾನ್ವಿ ಬಗ್ಗೆ ಕರ್ಣ ಹೇಳಿದ್ದೇನು..?

ಬೆಂಗಳೂರು : ಸಿಂಪಲ್​ ಸ್ಟಾರ್​ ರಕ್ಷಿತ್​ ಕೆಲ ದಿನಗಳ ಹಿಂದೆ ಸೋಷಿಯಲ್​ ಮೀಡಿಯಾಗೆ ಬೈ ಹೇಳಿದ್ರು, ಆದರೆ ಇದೀಗ ದಿಢೀರ್​ ಆಂತ ಫೇಸ್​ ಬುಕ್​ನಲ್ಲಿ ಪ್ರತ್ಯಕ್ಷರಾಗಿದ್ದಾರೆ ರಕ್ಷಿತ್​. ಈ ರೀ ಎಂಟ್ರಿಗೆ ಕಾರಣವನ್ನು ರಕ್ಷಿತ್​ ಕೊಟ್ಟಿದ್ದು, ಫೇಸ್​ ಬುಕ್​ ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಂಬಂಧಿತ ಚಿತ್ರ

ರಶ್ಮಿಕಾ ಮಂದಣ್ಣ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿಗೆ ರಕ್ಷಿತ್ ಶೆಟ್ಟಿ ಕೊನೆಗೂ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಹೊರ ಹೋಗಿದ್ದ ರಕ್ಷಿತ್ ಶೆಟ್ಟಿ ಮತ್ತೆ ವಾಪಸ್ ಬಂದು ಅಭಿಮಾನಿಗಳಿಗೆ  ಪತ್ರವನ್ನು ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ  ಮನದಾಳದ ಮಾತು ಹೇಳಿಕೊಂಡಿದ್ದಾರೆ.

 

ಫೇಸ್​ ಬುಕ್​ ಪೋಸ್ಟ್​ನಲ್ಲಿ ರಕ್ಷಿತ್​ ತುಂಬಾ ಮನದಾಳದಿಂದ ತಮ್ಮ ಮಾತುಗಳನ್ನು ಹೇಳಿದ್ದು,  ಈ ಘಟನೆಗಳು ಹೇಗೆ ಸಂಭವಿಸಿತು ಎಂಬ ಬಗ್ಗೆ ನಾನು ಯಾರನ್ನು ದೂಷಿಸುವುದಿಲ್ಲ. ನಾವೆಲ್ಲರೂ ನಮ್ಮ ಕಣ್ಣ ಮುಂದೆ ಏನ್ ನೋಡುತ್ತೇವೆ ಮತ್ತು ಏನು ಹೇಳುತ್ತೇವೆ ಅನ್ನೋದನ್ನು ಮಾತ್ರ ನಂಬುತ್ತೇವೆ. ಆದ್ರೆ, ಅದು ನಿಜವಾಗಬೇಕು ಅಂತ ಏನಿಲ್ಲ. ನಾನು ರಶ್ಮಿಕಾಳನ್ನು ಎರಡು ವರ್ಷದಿಂದ ನೋಡುತ್ತಿದ್ದು, ಆಕೆ ಏನು ಎನ್ನುವುದು ನಿಮಗೆಲ್ಲರಿಗಿಂತಲೂ ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ಆಕೆಯನ್ನು ದೂಷಿಸಬೇಡಿ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನು ನಂಬಲು ಹೋಗಬೇಡಿ. ಯಾರೊಬ್ಬರು ನನ್ನಿಂದ ಅಥವಾ ರಶ್ಮಿಕಾಳಿಂದ ಈ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿಲ್ಲ. ಹಲವು ಮಂದಿ ಅವರ ಊಹೆಗೆ ತಕ್ಕಂತೆ ಅವರಿಗೆ ಬೇಕಾದಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಊಹೆಗಳು ಯಾವತ್ತೂ ವಾಸ್ತವವಲ್ಲ.ಎಂದು ರಕ್ಷಿತ್​  ತಿಳಿಸಿದ್ದಾರೆ.

ಇನ್ನು ರಕ್ಷಿತ್​ ಶೆಟ್ಟಿ  ಹಾಗೂ ರಶ್ಮಿಕಾ ಬ್ರೇಕ್​ ಅಪ್​ ಅನ್ನೋ ವದಂತಿಗೆ ಸಮಾಧಾನವಾಗಿ ರಕ್ಷಿತ್​ ಉತ್ತರಿಸಿದ್ದು, ಎಲ್ಲಾ ಊಹಾಪೋಹಗಳಿಗೆ ಕರ್ಣ ಪೂರ್ಣ ವಿರಾಮ ಇಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com