ಸಂಸದೆ ರಮ್ಯಾಗೆ ಬಿಜೆಪಿ ಕಾರ್ಯಕರ್ತರಿಂದ ವ್ಯಂಗ್ಯದ ಬಾಗೀನ : ತವರಿಗೆ ಬರುವಂತೆ ಮನವಿ..!

ಮಂಡ್ಯ : ತವರು ಮರೆತ ಮಾಜಿ ಸಂಸದೆ ರಮ್ಯಗೆ ವ್ಯಂಗ್ಯದ ಬಿಜೆಪಿ ಕಾರ್ಯಕರ್ತರು ಬಾಗೀನ ನೀಡಿದ್ದಾರೆ. ಗೌರಿ ಹಬ್ಬದ ದಿನದಂದು ರಮ್ಯಾಗೆ ಬಾಗೀನ‌ ಪೋಸ್ಟ್ ಮಾಡಿ ತವರಿಗೆ ಬರುವಂತೆ ಮನವಿ ಮಾಡಲಾಗಿದೆ.

ಮಂಡ್ಯದ ಬಿಜೆಪಿ ಕಾರ್ಯಕರ್ತರಿಂದ ಬಾಗೀನ ಕಳಿಸಲಾಗಿದ್ದು, ಕಳೆದ ಲೋಕಸಭಾ ಚುನಾವಣೆ ಬಳಿಕ ತವರು ಜಿಲ್ಲೆ ಮಂಡ್ಯ ಮರೆತ ರಮ್ಯಾಗೆ ಬಾಗೀನದ ಮೂಲಕ ವ್ಯಂಗ್ಯ ಮಾಡಲಾಗಿದೆ.

ಎಐಸಿಸಿ ಸಾಮಾಜಿಕ ಜಾಲತಾಣದ ವಿಭಾಗಕ್ಕೆ ಬಿಜೆಪಿ ಕಾರ್ಯಕರ್ತರು ಬಾಗೀನ ಪೋಸ್ಟ್ ಮಾಡಿದ್ದಾರೆ. ತವರಿಗೆ ಬಂದು ಸ್ಥಳೀಯರ ಕಷ್ಟ ಸುಖ ವಿಚಾರಿಸಿ ಜಿಲ್ಲೆಯ ಜನ್ರ ಕಷ್ಟಕ್ಕೆ ಸ್ಪಂದಿಸಲಿ ಎಂದು‌ ಮನವಿ ಮಾಡಿಕೊಂಡಿದ್ದಾರೆ.

ಬಾಗೀನ ಕೊಟ್ಟು ತವರಿಗೆ ಕರೆದ್ರು ರಮ್ಯ ಬರದಿದ್ರೆ ಮುಂದೆ ಚುನಾವಣೆ ವೇಳೆ ಜಿಲ್ಲೆಗೆ ಬಂದಾಗ ಘೇರಾವ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com