ಜಾರಕಿಹೊಳಿ ಸೋದರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ : ಈಶ್ವರ್ ಖಂಡ್ರೆ

ಚಿತ್ರದುರ್ಗ : ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ‘ ದೇಶದ ಇತಿಹಾಸದಲ್ಲೇ ಯುದ್ದ ವಿಮಾನ ಖರೀದಿಯಲ್ಲಿ ಅತ್ಯಂತ ಭ್ರಷ್ಟಾಚಾರ ನಡೆದಿದೆ, ಮೋದಿ ನೇತೃತ್ವದ ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ‘ ಎಂದಿದ್ದಾರೆ.

‘ ದೇಶದಲ್ಲಿ ಅರಾಜಕತೆ, ಅಸಹಿಷ್ಣುತೆಯ ಭಯದ ವಾತಾವರಣ ಸೃಷ್ಟಿಯಾಗಿದೆ. ರೈತರು, ಶೋಷಿತರು, ಬಡವರು ಭಯದಿಂದ ಬದುಕುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿರಲು ನೈತಿಕತೆ ಇಲ್ಲ. ಅವಶ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದೆ. ರೈತರ, ಸಾಮಾನ್ಯ ಮಧ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ ‘ ಎಂದಿದ್ದಾರೆ.

‘ ರಾಜ್ಯದಲ್ಲಿ ಮೈತ್ರಿ ಸರ್ಕಾರ ನೂರಕ್ಕೆ ನೂರರಷ್ಟು ಸ್ಥಿರವಾಗಿದೆ. ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಜಾರಕಿಹೊಳಿ ಬ್ರದರ್ಸ್ ಅನುಭವಿಗಳು, ಬುದ್ದಿವಂತರು, ಅವರು ಕಾಂಗ್ರೆಸ್ ನ ನಿಷ್ಠಾವಂತ ಸದಸ್ಯರು, ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡುವುದಿಲ್ಲ. ಪಕ್ಷವನ್ನು ಇಬ್ಬಾಗ ಮಾಡಲು ಅವರು ಮುಂದಾಗುವುದಿಲ್ಲ ‘ ಎಂದು ಹೇಳಿದ್ದಾರೆ.

‘ ಕಾಂಗ್ರೆಸ್ ನ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ಅಧಿಕಾರ ಬೇಕಾದರೆ ಕಾಂಗ್ರೆಸ್ ಗೆ ಬರ್ತಾರೆ, ಸರ್ಕಾರ ಬೀಳುತ್ತದೆ ಎನ್ನುವುದು ಬಿಜೆಪಿಯವರ ಕಪೋಲ ಕಲ್ಪಿತ, ಖಾಲಿ ಇರುವ ಆರು ಸಚಿವ ಸ್ಥಾನವನ್ನ ಸಾಮಾಜಿಕ ನ್ಯಾಯದಡಿ ಎಲ್ಲಾ ವರ್ಗದವರಿಗೆ ನೀಡಲಾಗುತ್ತದೆ ‘ ಎಂದು ಚಿತ್ರದುರ್ಗದಲ್ಲಿ‌ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com