ಸರ್ಕಾರ ತಾನಾಗಿಯೇ ಉರುಳಿ ಹೋಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ‘ ರಾಜ್ಯದಲ್ಲಿ ಸರ್ಕಾರ ಇಲ್ಲ ಎಂದು ಬಿಜೆಪಿಯವರು ಹೇಳುವ ಅವಶ್ಯಕತೆಯಿಲ್ಲ. ಅದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೇ ಹೇಳುತ್ತಿದ್ದಾರೆ. ರಾಜ್ಯದ ಇತಿಹಾಸದಲದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಇಲ್ಲ ಎಂದು ನೊಂದು ಹೇಳುತ್ತಿದ್ದೇನೆ ‘ ಎಂದಿದ್ದಾರೆ.

‘ ಜಾರಕಿಹೊಳಿ ಬ್ರದರ್ಸ್ ಸೇರಿದಂತೆ ಹಲವರು ಸರ್ಕಾರಕ್ಕೆ ಗಡುವು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯವರು ಸರ್ಕಾರ ಉರುಳಿಸುವ ಪ್ರಯತ್ನ ಮಾಡಲ್ಲ‌.‌ ತಾನಾಗಿಯೇ ಸರ್ಕಾರ ಉರುಳಿ ಹೋಗಲಿದೆ. ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ‘ ಎಂದಿದ್ದಾರೆ.

ಬಿಜೆಪಿಯ 5 ಶಾಸಕರನ್ನು ನಾವು ಸೆಳೆಯುತ್ತೇವೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಸಿಎಂ ಗೆ ತಿರುಗೇಟು ನೀಡಿದ್ದಾರೆ. ‘ ನಾವು ಆಪರೇಶನ್ ಕಮಲ ಮಾಡಿದರೇ ಜೆಡಿಎಸ್- ಕಾಂಗ್ರೆಸ್ ನವರು ತಪ್ಪು ಎನ್ನುತ್ತಾರೆ. ತಪ್ಪು- ಸರಿ ಯಾವುದು ಎಂಬುದನ್ನು ರಾಜ್ಯದ ಜನರೇ ನಿರ್ಧರಿಸುತ್ತಾರೆ. ಬಿಜೆಪಿಯ 104 ಶಾಸಕರು ಹುಲಿಗಳಿದ್ದಂತೆ ಯಾರು ಮುಟ್ಟಲೂ ಸಾಧ್ಯವಿಲ್ಲ ‘ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ- ಶಿವಮೊಗ್ಗ ಅಭ್ಯರ್ಥಿಗಳ ಪಟ್ಟಿಯಲ್ಲಿ ಈಶ್ವರಪ್ಪ ಹೆಸರು ಸೇರ್ಪಡೆ ವಿಚಾರವಾಗಿ ಮಾತಣಾಡಿದ ಅವರು ‘ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ ನಾನು. ಪರಿವಾರದವರು ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಹೇಳಿದರೇ ಸಿದ್ದ. ಯಾರೋ ಹೇಳಿದ್ದಾರೆ ಎಂದರೇ ಅದಕ್ಕೆ ನಾನು ಅಭ್ಯರ್ಥಿ ಯಾಗಲು ಸಾಧ್ಯವಿಲ್ಲ. ಪಕ್ಷದ ನಾಯಕರುಗಳು, ಹಿರಿಯರು ಬಯಸಿದರೇ ಅವರು ಮಾತನ್ನು ಮೀರಲ್ಲ. ಪಕ್ಷದ ಕಾರ್ಯಕರ್ತನಾಗಿ ವರಿಷ್ಟರ ತೀರ್ಮಾನಕ್ಕೆ ನಾನು ಬದ್ಧ ‘ ಎಂದು ಈಶ್ವರಪ್ಪ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com