ಎಲ್ಲೆಡೆ ಗೌರಿ-ಗಣೇಶ್​ ಹಬ್ಬದ ಸಂಭ್ರಮ : ಗಣಪನ ವಿಸರ್ಜನೆಗೆ ಅಗತ್ಯ ಕ್ರಮಗಳನ್ನು ರೂಪಿಸಿದ ಬಿಬಿಎಂಪಿ..? ಏನದು..

ಬೆಂಗಳೂರು : ಎಲ್ಲೆಡೆ  ಗೌರಿ- ಗಣೇಶ್​ ಹಬ್ಬದ  ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದು, ಬೀದಿ ಬೀದಿಯಲ್ಲೂ ಡೊಳ್ಳು ಹೊಟ್ಟೆ ಗಣಪನ ಮೂರ್ತಿಗಳು ರಾರಾಜಿಸುತ್ತಿದ್ದರೆ, ಇತ್ತ ಕಡೆ ಬಿಬಿಎಂಪಿ ಗಣೇಶನ ವಿರ್ಸಜನೆಗೆ ಅಗತ್ಯ ಕ್ರಮಗಳನ್ನು ರೂಪಿಸಲು  ಸಿದ್ಧತೆ ನಡೆಸುತ್ತಿದ್ದಾರೆ.

ಗೌರಿ- ಗಣೇಶ್​ ಹಬ್ಬ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ ಮನೆಮಾಡಿರುತ್ತದೆ, ಅಂತೆಯೇ ಗಣಪನ ವಿಸರ್ಜನೆಯ ಸಮಯದಲ್ಲಿ ಅವಘಡಗಳು ನಡೆಯತ್ತವೆ, ಅದಕ್ಕಾಗಿ  ಬಿಬಿಎಂಪಿ ವಿಸರ್ಜನೆಗೆ ಅಗತ್ಯ ಕ್ರಮಗಳನ್ನು ರೂಪಿಸಿದ್ದು, ರಾತ್ರಿ 11 ಗಂಟೆಯ ಬಳಿಕ ಯಾವುದೇ ಮೂರ್ತಿ ವಿಸರ್ಜನೆಗೆ ಅವಕಾಶವಿರುವುದಿಲ್ಲ ಎಂದು ಪಾಲಿಕ ಮುನ್ನೆಚ್ಚರಿಕೆ ನೀಡಿದೆ. ಗಣೇಶನ ವಿಸರ್ಜನೆಗೆ ಸ್ಯಾಂಕಿ, ಹಲಸೂರು, ಯಡಿಯೂರು ಕೆರೆ ಸೇರಿದಂತೆ 22 ಕೆರೆಗಳ ವ್ಯವಸ್ಥೆ ಮಾಡಿದ್ದು ಸಾರ್ವಜನಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕ ಗಣಪತಿಗಳ ವಿಸರ್ಜನೆಗೆ ಪ್ರತಿವಲಯಗಳ ಪ್ರಮುಖ ಜಂಕ್ಷನ್​ ಮತ್ತು ಅವಶ್ಯವಿರುವ ಕಡೆ ಬಿಬಿಎಂಪಿ 282 ಕೃತಕ ಕೆರೆಗಳನ್ನು ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

‘ಕೆರೆಗಳ ಸುತ್ತಮುತ್ತ ಸೇರಿದಂತೆ ಕಲ್ಯಾಣಿ ಆವರಣದಲ್ಲಿಯೂ ತಡೆಗೋಡೆ ಮಾಡುವ ಮೂಲಕ ಪ್ರವೇಶದ್ವಾರದ ಬಗ್ಗೆ ಸೂಕ್ತ ಮಾಹಿತಿಯ ಬ್ಯಾನರ್​ ಹಾಕಲಾಗಿದೆ. ವಿಸರ್ಜನಾ ಕೇಂದ್ರದಲ್ಲಿ ನಡೆಯುವ ಅವಘಡ ತಪ್ಪಿಸಲು ಹತ್ತು ಮಂದು ನುರಿತ ಈಜುಗಾರರು, ಅಗತ್ಯ ಸಿಬ್ಬಂದಿಗಳನ್ನು ಮಾರ್ಗದರ್ಶನ ಮಾಡಲು ನೇಮಿಸಲಾಗಿದೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com