ಸರ್ಕಾರ ಇರಲಿದೆ ಎಂದು ಕಾಂಗ್ರೆಸ್​ಗೆ ಆಸೆ ಇಲ್ಲ, ಜೆಡಿಎಸ್​ಗೆ ನಂಬಿಕೆ ಇಲ್ಲ : ಸಿ ಟಿ ರವಿ

ಚಿಕ್ಕಮಗಳೂರು : ‘ಸರ್ಕಾರ ಇರಲಿದೆ ಎಂದು ಕಾಂಗ್ರೆಸ್‍ನವರಿಗೆ ಆಸೆ ಇಲ್ಲ, ಜೆಡಿಎಸ್‍ನವರಿಗೆ ನಂಬಿಕೆ ಇಲ್ಲ. ಹೆಚ್​ಡಿಕೆ ಅದೃಷ್ಟದಿಂದ ಸಿಎಂ ಆದ್ರು, ಅದೃಷ್ಟ ಖಾಲಿ ಆದ ಮೇಲೆ ಕೆಳಗೆ ಇಳಿಯುತ್ತಾರೆ’.  ಎಂದು ಶಾಸಕ ಸಿ ಟಿ ರವಿ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ ಟಿ ರವಿ, ‘ಸಮನ್ವಯ ಸಮಿತಿ ಅಧ್ಯಕ್ಷರ ಪತ್ರದಿಂದ ಅವರ ನೋವು ಅರ್ಥವಾದ್ರೆ, ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಅಸ್ಫೋಟಗೊಂಡ್ರೆ ಸರ್ಕಾರ ಬಿದ್ದೋಗುತ್ತೆ, ಕುಮಾರಸ್ವಾಮಿ ಅದೃಷ್ಠದಿಂದ ಸಿಎಂ ಆಗಿದ್ದಾರೆ, ಅದೃಷ್ಠ ಖಾಲಿಯಾದ ಮೇಲೆ ಕೆಳಗೆ ಇಳಿಯುತ್ತಾರೆಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮೈತ್ರಿ ಸರ್ಕಾರ ಹಾಗೂ ಸಿಎಂ ಕುರ್ಚಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

’37 ರವರು ಸಿಎಂ ಆಗೋದನ್ನ ಸೋಶಿಯಲ್ ಜಸ್ಟೀಸ್ ಅಂತೀರೋ, ನ್ಯಾಚುರಲ್ ಜಸ್ಟೀಸ್ ಅಂತೀರೋ, ಜೆಡಿಎಸ್ ಪಡೆದ ಸ್ಥಾನಗಳಲ್ಲಿ ಶೇ.70ರಷ್ಟು ಕಾಂಗ್ರೆಸ್‍ನದ್ದು. ಅವರು ಕೆಟ್ಟವರೆಂದು ಹೇಳಿ ಅವರ ಮತಗಳನ್ನ ಪಡೆದ್ರು. ಈ ಸರ್ಕಾರಕ್ಕೆ ಸೈದ್ಧಾಂತಿಕ ಬದ್ಧತೆಯೂ ಇಲ್ಲ. ಸರ್ಕಾರ ರಚನೆಯಾದಾಗಿನಿಂದ ಕಾಂಗ್ರೆಸ್, ಜೆಡಿಎಸ್‍ನವರಿಗೆ ಸಮಾಧಾನವಿಲ್ಲ. ಸರ್ಕಾರ ಉಳಿಸಿಕೊಳ್ಳೋ ಕೆಲಸ ನಮ್ಮದ್ದಲ್ಲ. ನಾವು ಬಿಜೆಪಿಗೆ ರಾಜಯೋಗ ಬರಲೆಂದು ಬಯಸಲ್ಲ, ಭಾರತಕ್ಕೆ ರಾಜಯೋಗ ಬರಲೆಂದು ಬಯಸೋರು, ಸರ್ಕಾರ ಬೀಳಿಸಲ್ಲ, ಬಿದ್ರೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು ಕೂರೋಕೆ ನಾವು ಸನ್ಯಾಸಿಗಳಲ್ಲ’ ಎಂದು  ಸಿ  ಟಿ ರವಿ ಹೇಳಿಕೆ ನೀಡಿದ್ರು.

 

Leave a Reply

Your email address will not be published.

Social Media Auto Publish Powered By : XYZScripts.com