Cricket : 5ನೇ ಟೆಸ್ಟ್ ನಲ್ಲಿ ಭಾರತಕ್ಕೆ ಸೋಲು : 4-1 ರಿಂದ ಸರಣಿ ಗೆದ್ದ ಇಂಗ್ಲೆಂಡ್

ಲಂಡನ್ನಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭಾರತದ ವಿರುದ್ಧ 117 ರನ್ ಜಯ ದಾಖಲಿಸಿದೆ. ಈ ಮೂಲಕ ಜೋ ರೂಟ್ ಪಡೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಜಯಿಸಿದೆ.

ಗೆಲ್ಲಲು 464 ರನ್ ಗುರಿಯನ್ನು ಬೆನ್ನಟ್ಟಿದ್ದ ಭಾರತ ಐದನೇ ದಿನದಾಟದಲ್ಲಿ 345ಕ್ಕೆ ಆಲೌಟ್ ಆಯಿತು. ದಿಟ್ಟ ಹೋರಾಟ ಪ್ರದರ್ಶಿಸಿದ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ 204 ರನ್ ಜೊತೆಯಾಟವಾಡಿದರು.

224 ಎಸೆತಗಳನ್ನು ಎದುರಿಸಿದ ರಾಹುಲ್ 20 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 149 ರನ್ ಗಳಿಸಿದರು. 146 ಎಸೆತಗಳನ್ನು ಎದುರಿಸಿದ ವಿಕೆಟ್ ಕೀಪರ್ ರಿಷಭ್ ಪಂತ್ 15 ಬೌಂಡರಿ 4 ಸಿಕ್ಸರ್ ಗಳ ನೆರವಿನಿಂದ 114 ರನ್ ಬಾರಿಸಿದರು.

ಇಂಗ್ಲೆಂಡ್ ಪರವಾಗಿ ಜೇಮ್ಸ್ ಆ್ಯಂಡರ್ಸನ್ 3, ಸ್ಯಾಮ್ ಕರನ್ 2 ಹಾಗೂ ಆದಿಲ್ ರಾಶಿದ್ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com