ಚಿಕ್ಕಮಗಳೂರು : ಪುರಾತನ ಕಾಲದ ಹಾಲಜ್ಜ ದೇವಸ್ಥಾನದಲ್ಲಿ ವಿಗ್ರಹ, ಹಣ ಕಳ್ಳತನ..

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿರುವ ಪುರಾತನ ಕಾಲದ ಹಾಲಜ್ಜ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಹಳೆ ಕಾಲದ ವಿಗ್ರಹಗಳು ಹಾಗೂ ಹುಂಡಿಯಲ್ಲಿರುವ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿರುವ ಘಟನೆ ಇದಾಗಿದೆ. ಹಿಂದೂ – ಮುಸ್ಲಿಂ ಒಗ್ಗಟ್ಟಾಗಿ ಪೂಜಿಸುವ ಹಾಲಜ್ಜ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com