‘ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ’ : ಸಾ ರಾ ಮಹೇಶ್​

ಮೈಸೂರು : ‘ನಾನು ಸಹ 20 ವರ್ಷ ಬಿಜೆಪಿಯಲ್ಲಿ ಇದ್ದೇನು , ನಮಗೂ ರಾಜಕಾರಣ ಮಾಡಲು ಬರುತ್ತದೆ’ ಎಂದು ರೇಷ್ಮೆ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಬಿಜೆಪಿ ನಾಯಕರಿಗೆ  ಖಡಕ್​ ವಾರ್ನಿಗ್​ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಾ ರಾ ಮಹೇಶ್​,  ’20ವರ್ಷ ನಾನು ಸಹ ಬಿಜೆಪಿಯಲ್ಲಿ ಇದ್ದವನ್ನು, ಬಿಜೆಪಿಯ ಅನೇಕ ಶಾಸಕರು ನನ್ನ ಸಂಪರ್ಕದಲ್ಲಿರುವ ವಿಷಯ ಜೆಡಿಎಸ್​ ವರಿಷ್ಠರಿಗೆ ಗೊತ್ತಿದೆ. ನಾವು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ನಾವೇನು ಸುಮ್ಮನೆ ಕುಳಿತಿಲ್ಲ. ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃಧ್ಧಿ ಕಡೆ ಗಮನ ಕೊಡುತ್ತಿದೆ. ಸಮಿಶ್ರ ಸರ್ಕಾರ ಬೀಳುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದ್ರು.

‘ನಮ್ಮ ಶಾಸಕರು ಎಲ್ಲರೂ ಒಳ್ಳೆಯವರಿದ್ದಾರೆ,  ನಮ್ಮ ಪಕ್ಷದವರು ರಾಷ್ಟ್ರ ಮಟ್ಟದಲ್ಲಿ ಪ್ರಧಾನಿಯಾಗಿದ್ದಾರೆ, ಕೆಲವು ಬಿಜೆಪಿ ಮುಖಂಡರು ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. ಜನ ಬಿಜೆಪಿಗೆ ಅಧಿಕಾರ ಕೊಟ್ಟಿದ್ದರು. ಆದರೆ ಈಗ ನಮಗೆ ಕೆಲಸ ಮಾಡಲು ಬಿಡಿ. ಸಾಲ ಮನ್ನಾ ಮಾಡಿ ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ಸಿಕ್ಕಿದೆ, ಬಿಜೆಪಿಯವರು ಪ್ರಧಾನಿ ಭೇಟಿಗೆ ಹೋಗಲಿಲ್ಲ, ಇಲ್ಲಿ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಇದು ಮುಂದುವರಿದರೆ ನಾವು ಸುಮ್ಮನೆ ಕೂರುವುದಿಲ್ಲ‌’ ಎಂದು ಬಿಜೆಪಿಯವರಿಗೆ ಮೈಸೂರಿನಲ್ಲಿ ಸಚಿವ ಸಾ.ರಾ ಮಹೇಶ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.