ವಿಜಯಪುರ : ವಿಧಾನ ಪರಿಷತ್ ಉಪಚುನಾವಣೆ – ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಗೌಡ ಜಯಭೇರಿ

ವಿಜಯಪುರ : ವಿಜಯಪುರ-ಬಾಗಲಕೋಟೆ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಅಧಿಕೃತ ಫಲಿತಾಂಶ ಪ್ರಕಟವಾಗಿದೆ.

ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ 4,819 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿ‌ ಅಭ್ಯರ್ಥಿ ಗೂಳಪ್ಪ ಶೆಟಗಾರ ಸೋಲು ಕಂಡಿದ್ದಾರೆ.

ಗೂಳಪ್ಪ ಶೆಟಗಾರ 2,779 ಮತಗಳನ್ನು ‌ಪಡೆದಿದ್ದಾರೆ. ಸುನೀಲ್ ಗೌಡ ಪಾಟೀಲ್ 2,040 ಮತಗಳ ಅಂತರದ ಗೆಲುವು ಪಡೆದಿದ್ದಾರೆ. ಇನ್ನಿತರ ಐವರು ಅಭ್ಯರ್ಥಿಗಳು ಕೇವಲ 59 ಮತಗಳನ್ನು ಪಡೆದಿದ್ದಾರೆ. 454 ಮತಗಳು ತಿರಸೃತಗೊಂಡಿದ್ದು, ಒಟ್ಟು 8,111 ಮತಗಳು ಚಲಾವಣೆಯಾಗಿದ್ದವು

Leave a Reply

Your email address will not be published.

Social Media Auto Publish Powered By : XYZScripts.com