ಜಾರಕಿಹೊಳಿ ಸೋದರರು ಬಿಜೆಪಿಗೆ ಹೋಗಲ್ಲ, ಕಾಂಗ್ರೆಸ್ ನಲ್ಲೇ ಇರ್ತಾರೆ : ಎಂ.ಬಿ ಪಾಟೀಲ್

ವಿಜಯಪುರ : ಜಾರಕಿಹೊಳಿ ಸಹೋದರರ ಅಸಮಾಧಾನ, ರಾಜೀನಾಮೆ ವಿಚಾರವಾಗಿ ವಿಜಯಪುರದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.’ ಅವರು ರಾಜೀನಾಮೆ ನೀಡಿಲ್ಲ, ಇದು ಅಧಿಕೃತವಾಗಿ ನಂಬುವಂತಹದ್ದಲ್ಲ. ಒಂದುವೇಳೆ ರಾಜೀನಾಮೆ ನೀಡಿದ್ರೆ ಅವರ ಮನ ಒಲಿಸಲಾಗುವುದು, ರಾಜೀನಾಮೆ ವಾಪಸ್ಸು ಪಡೆಯುವಂತೆ ಹೇಳುತ್ತೇವೆ ‘ ಎಂದಿದ್ದಾರೆ.

‘ ಅವರು ಪಕ್ಷ ಬಿಡಲ್ಲ, ಕಾಂಗ್ರೆಸ್ ನಲ್ಲೆ ಇರ್ತಾರೆ. ಅವರ ಅಸಮಾಧಾನಕ್ಕೆ ಸ್ಥಳೀಯವಾಗಿ ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಒಂದು ಕುಟುಂಬದಲ್ಲಿ ಗಂಡ-ಹೆಂಡತಿ ಹಾಗೂ ಅಣ್ಣತಮ್ಮಂದಿರ ಮದ್ಯೆ ಇರುವ ಹಾಗೆ ಸಮಸ್ಯೆಗಳು ಇರ್ತಾವೆ ‘ ಎಂದಿದ್ದಾರೆ.

‘ ಬಿಜೆಪಿಯಿಂದ ಡಿಸಿಎಂ ಮಾಡುವ ಆಮಿಷ ವಿಚಾರಕ್ಕೆ ಪ್ರತಿಕ್ರಿಯೆ. ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗಲ್ಲ. ಅಲ್ಲಿ ಹೋದ್ರೆ ಅವರು ಡಿಸಿಎಂ ಆಗೋದು ಹಾಗೂ ಬಿಜೆಪಿ ಅಧಿಕಾರಕ್ಕೆ ಬರೋದು ಎರಡೂ ಕನಸಿನ ಮಾತು ‘ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com