ಕಲಬುರ್ಗಿ : ಕಾರು ಪಲ್ಟಿಯಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸಾವು..!
ಕಲಬುರ್ಗಿ – ಕಾರು ಪಲ್ಟಿಯಾಗಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಾವನ್ನಪ್ಪಿರುವ ದುರ್ಘಟನೆ ಕಲಬುರ್ಗಿ ಜಿಲ್ಲೆ ಕಾಳಗಿ ಬಳಿ ನಡೆದಿದೆ. ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮನೋಹರ್ ಕಾಂಬ್ಳೆ ಮೃತ ದುರ್ದೈವಿಯಾಗಿದ್ದಾರೆ.
ಕಲಬುರ್ಗಿಯ ಕುಸನೂರಿನ ನಿವಾಸಿಯಾಗಿದ್ದ ಮನೋಹರ್ ಕಾಂಬ್ಳೆ ಚಿಂಚೋಳಿ ಕಡೆಯಿಂದ ಒಬ್ಬನೇ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದಾಗ ದುರ್ಘಟನೆ ಸಂಭವಿಸಿದ್ದು, ಮನೋಹರ್ ಕಾಂಬ್ಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಂಸದ ಮಲ್ಲಿಕಾರ್ಜುನ ಖರ್ಗೆಯವರು ಮೃತಪಟ್ಟಿರುವ ಮನೋಹರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.