ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಹೊರಗಿನ ಮಾತುಗಳಿಗೆ ಕಿವಿಕೊಡುವ ಅಗತ್ಯವಿಲ್ಲ : ಖರ್ಗೆ

ಕಲಬುರಗಿ : ಕಲ್ಬುರ್ಗಿಯಲ್ಲಿ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ‘ ರಮೇಶ್ ಜಾರಕಿಹೊಳಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಹಾನಿ ತರುವಂತ ಕೆಲಸ ಮಾಡುವುದಿಲ್ಲ ಮೊದಲಿನಿಂದಲೂ ರಮೇಶ್ ನನ್ನ ಆತ್ಮೀಯರು, ಅವರೊಬ್ಬ ಸ್ವಾಭಿಮಾನಿ ವ್ಯಕ್ತಿ. ಪಕ್ಷ ಬಿಡಲು ಏಕೆ ಮುಂದಾಗಿದ್ದಾರೆ ವಿಚಾರಿಸುತ್ತೇನೆ ‘ ಎಂದಿದ್ದಾರೆ.

‘ ಸತೀಶ್, ರಮೇಶ್ ಇಬ್ಬರು ಸಹೋದರರೊಂದಿಗೆ ಮಾತನಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಹೊರಗಿನ ಮಾತುಗಳಿಗೆ ಕಿವಿ ಕೊಡುವ ಅಗತ್ಯವಿಲ್ಲ. ಬಿಜೆಪಿಯವರು ಅಧಿಕಾರಿಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ ‘ ಕಾಂಗ್ರೆಸ್ ಸಂಸದಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com