ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು : ಮೋದಕ ಪ್ರಿಯ ಮಾಡಿದ್ದಾದ್ರು ಏನು..?

ದಾವಣಗೆರೆ : ಗಣೇಶ ಮೂರ್ತಿ ತಯಾರಿಕಾ ಘಟಕದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿ ಒಂದು ಸಾವಿರಕ್ಕೂ ಹೆಚ್ಚು ಪಿಓಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗಡಿ ಮಾಕುಂಟೆ ಗ್ರಾಮದಲ್ಲಿ ದೇವರ ಮೂರ್ತಿಯನ್ನು ತಯಾರಿಸುವ ಘಟಕದಲ್ಲಿ ಕಳೆದ ನಾಲ್ಕು ತಿಂಗಳಿಂದ  ಪಿಓಪಿ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾವಣಗೆರೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸುರೇಶ್​ ನೇತ್ರತ್ವದಲ್ಲಿ  ಈ ದಾಳಿ ನಡೆದಿದ್ದು, ದಾಳಿ ಮಾಡಲು ಜಗಳೂರು ಪೊಲೀಸರು ಸಾಥ್​ ನೀಡಿದ್ರು. ಅಕ್ರಮವಾಗಿ ಕೆಲ ತಿಂಗಳಿಂದ ಪಿಓಪಿ ಗಣೇಶ್​ ಮೂರ್ತಿಯನ್ನು ತಯಾರಿಸುತ್ತಿದ್ದರು. ಪರಿಸರಕ್ಕೆ ಹಾನಿ ಮಾಡುವ ಬಹುತೇಕ ಪ್ರದೇಶದಲ್ಲಿ ನೀರು ಕಲುಷಿತ ಗೊಳಿಸುವ ಅಂಶ ಗಣೇಶ ಮೂರ್ತಿಯಲ್ಲಿ ಇದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು. ಇನ್ನು ನಾಲ್ಕು ಕುಟುಂಬಗಳು ಗಣೇಶ ಮೂರ್ತಿಯನ್ನು ಸಿದ್ದಪಡಿಸಿದ್ದವು.

 

Leave a Reply

Your email address will not be published.

Social Media Auto Publish Powered By : XYZScripts.com