ನಾಡ ಹಬ್ಬ ದಸರಾಗೆ ಸಕಲ ಸಿದ್ಧತೆ : ಗಜನ ಆರೈಕೆ ಮಾಡಲು ಬಂದ ಮಹಾರಾಜ…!

ಮೈಸೂರು : ದಸರಾ ಎಂದರೆ ನಮ್ಮಗೆ ಮೊದಲು ನೆನಪಾಗುವುದು ಆನೆಗಳು, ಮೈಸೂರಿನ  ಪೂರ್ತಿ  ಅಂಬಾರಿಯನ್ನು ಹೊತ್ತು ತಿರುಗುವ ಆನೆಗಳ ತಾಲೀಮು ಶುರುವಾಗಿದ್ದು, ಅರ್ಜುನನ ಟೀಂನನ್ನು ಖುದ್ದು  ರಾಜ ಯದುವೀರ್​ ಒಡೆಯರ್ ಬಂದು​ ಆರೈಕೆ ಮಾಡಿದ್ರು.

ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದುಕೊಂಡಿದೆ ಈ  ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ  ಅರ್ಜುನ ಅಂಡ್ ಟೀಂನ ಆನೆಗಳು ಬಾರೀ ವರ್ಕ್​ ಔಟ್​ ಮಾಡುತ್ತಿದ್ದು,  ಮೈಸೂರು ಮಹಾರಾಜರ ಯದುವೀರ್​ ಖುದ್ದು ತಾವೇ ಬಂದು ಅರ್ಜುನನಿಗೆ ಕಬ್ಬು, ಬೆಲ್ಲ ಹಾಗೂ ಬಾಳೆ ಹಣ್ಣನ್ನು ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯು ಸಹ ಅರ್ಜುನ ದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ. ಹೀಗಾಗಿ ಅರ್ಜುನ ಹಾಗೂ ಇತರೆ ಆನೆಗಳಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

Yaduveer Krishnadatta Chamaraja Wadiyar यांनी वर पोस्ट केले सोमवार, १० सप्टेंबर, २०१८

ಅರ್ಜುನ್​ ಟೀಂನ ಆರೈಕೆ ಮಾಡಲು ಮಹಾರಾಜರು ಖುದ್ದು ತಾವೇ ಬಂದು ಆರೈಕೆ ಮಾಡಿರುವುದನ್ನು ತಮ್ಮ ಫೇಸ್​ ಬುಕ್​ನಲ್ಲಿ ಹಾಕಿಕೊಂಡಿದ್ದಾರೆ. ‘ದಸರಾದಲ್ಲಿ ಆನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಹೋತ್ಸವಕ್ಕೆ ಆಗಮಿಸಿರುವ  ಗಜಪಡೆಯನ್ನು ನೋಡಿ ತುಂಬಾ ಸಂತೋಷವಾಗಿದೆ’ ಎಂದು ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com