Cricket : ವಿದಾಯದ ಪಂದ್ಯದಲ್ಲಿ ಕುಕ್ ಅಮೋಘ ಶತಕ : ಸೋಲಿನ ಸುಳಿಯಲ್ಲಿ ಭಾರತ

ಲಂಡನ್ನಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿದೆ. ಗೆಲುವಿಗೆ 464 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿರುವ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 58 ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಶಿಖರ್ ಧವನ್ 1 ರನ್ ಗಳಿಸಿ ಔಟಾದರೆ, ಚೇತೇಶ್ವರ ಪೂಜಾರಾ ಹಾಗೂ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರು. 4ನೇ ದಿನದಾಟದ ಅಂತ್ಯಕ್ಕೆ ಲೋಕೇಶ್ ರಾಹುಲ್ (46*) ಹಾಗೂ ಅಜಿಂಕ್ಯ ರಹಾನೆ (10*) ಅಜೇಯರಾಗುಳಿದಿದ್ದಾರೆ.

ಆತಿಥೇಯ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 423 ರನ್ ಗಳ ಬೃಹತ್ ಮೊತ್ತ ಸೇರಿಸಿ ಡಿಕ್ಲೇರ್ ಮಾಡಿಕೊಂಡು ಭಾರತಕ್ಕೆ 464 ರನ್ ಟಾರ್ಗೆಟ್ ನೀಡಿತು. ವಿದಾಯದ ಪಂದ್ಯವನ್ನಾಡುತ್ತಿರುವ ಆರಂಭಿಕ ಬ್ಯಾಟ್ಸಮನ್ ಅಲಿಸ್ಟರ್ ಕುಕ್ 33ನೇ ಟೆಸ್ಟ್ ಶತಕ ಬಾರಿಸಿದರು. 286 ಎಸೆತಗಳನ್ನು ಎದುರಿಸಿದ ಕುಕ್ 14 ಬೌಂಡರಿಗಳನ್ನು ಸಿಡಿಸಿ 147 ರನ್ ಬಾರಿಸಿದರು.

ಇಂಗ್ಲೆಂಡ್ ನಾಯಕ ಜೋ ರೂಟ್ ಸಹ ಶತಕ ದಾಖಲಿಸಿದರು. 190 ಎಸೆತಗಳನ್ನೆದುರಿಸಿದ ರೂಟ್ 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 125 ರನ್ ಬಾರಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com