‘ಬಿಜೆಪಿಯವರಂತೆ ನಾವು ವಾಮ ಮಾರ್ಗ ಅನುಸರಿಸುವುದಿಲ್ಲ’ : ಪ್ರಿಯಾಂಕ್‍ ಖರ್ಗೆ

ಕಲಬುರಗಿ : ‘ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆದ್ರೆ ನಾವು ಬಿಜೆಪಿ ಶಾಸಕರನ್ನು ಸೆಳೆದು ಅಧಿಕಾರ ಉಳಿಸಿಕೊಳ್ಳುತ್ತೇವೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಮೇಶ ಜಾರಕಿಹೊಳಿ ರಾಜೀನಾಮೆ ವದಂತಿ ಹಿನ್ನಲೆ ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ವಾಮಮಾರ್ಗದಿಂದ ಅಧಿಕಾರ ಹಿಡಿಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಶಾಸಕರನ್ನು ಅವರು ಸೆಳೆದರೆ ಬಿಜೆಪಿ ಶಾಸಕರನ್ನು ನಾವು ಸೆಳೆಯುತ್ತೇವೆ. ಈಗಾಗಲೇ ಹಲವು ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದರು. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಶಾಸಕರನ್ನು ನಾವು ಸೆಳೆಯುವುದು ಅನಿವಾರ್ಯವಾಗಿದೆ. ಹಾಗಂತ ಬಿಜೆಪಿಯವರಂತೆ ನಾವು ವಾಮ ಮಾರ್ಗ ಅನುಸರಿಸುವದಿಲ್ಲ’ ಎಂದರು.

ಇದೆ ವೇಳೆ ರಾಜ್ಯ ಬಿಜೆಪಿ ವಿರುದ್ದ ಗುಡುಗಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ. ಆದ್ರೆ ರಾಜ್ಯ ಬಿಜೆಪಿ ನಾಯಕರಲ್ಲಿ ತಾಕತ್ತಿಲ್ಲ ಹೀಗಾಗಿ ಹೊರ ರಾಜ್ಯದ ನಾಯಕರ ಮದ್ಯಪ್ರವೇಶ ಮಾಡ್ತಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಟ್ನಾವಿಸ್ ಎಂಟ್ರಿಯಿಂದ ಯಾವುದೇ ವ್ಯತ್ಯಾಸ ಆಗಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಯಾವುದೇ ಕುತಂತ್ರಕ್ಕೆ ರಾಜ್ಯ ಮೈತ್ರಿ ಸರ್ಕಾರ ಬಗ್ಗೋದಿಲ್ಲ ಎಂದು ಟಾಂಗ್ ಕೊಟ್ಟರು. ಇನ್ನು ಸಚಿವ ರಮೇಶ ಜಾರಕಿಹೊಳಿ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅನ್ಯಾಯ ಮಾಡುವದಿಲ್ಲ ಎಂಬ ನಂಬಿಕೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ರು.

Leave a Reply

Your email address will not be published.