ಮೈಸೂರಿನಲ್ಲಿ ಸಿಎಂ ಸೀರೆ ವಿತರಣೆ : ರೇಷ್ಮೆ ಸೀರೆ ಪಡೆಯಲು ಮುಗಿಬಿದ್ದ ನಾರಿಯರು..!

ಮೈಸೂರು : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಮಹಿಳೆಯರಿಗೆ ರೇಷ್ಮೆ ಸೀರೆ ನೀಡುತ್ತಿದ್ದು, ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಪಡೆಯಲು ಮಹಿಳೆಯರು ಮುಗಿ ಬಿದ್ದಿದ್ದಾರೆ.

ಮೈಸೂರಿನ ಕೆಎಸ್ ಐಸಿ ಮಳಿಗೆ ಬಳಿ ಮಹಿಳೆಯರು ರಿಯಾಯಿತಿ ದರದ ರೇಷ್ಮೆ ಸೀರೆ ಪಡೆಯಲು ನೂಕು ನುಗ್ಗಲಿನಲ್ಲಿ ನಾರಿಯರು ಹರಸಾಹಸ ಪಡುತ್ತಿದ್ದಾರೆ. ಮಹಿಳೆಯರು ಸೀರೆ ಪಡೆಯಲು ಬಂದು ಆಸನಗಳಿಗಾಗಿ ಒಬ್ಬರ ಮೇಲೋಬ್ಬರು ಮುಗಿಬಿದ್ದು ಜಗಳವಾಡಿದ್ದರು. ಇದನ್ನು ನೋಡಿ ಪೊಲೀಸರು ಮೂಕ ಪ್ರೇಕ್ಷಕರಾದ್ರು.

ರಿಯಾಯಿತಿ ದರದಲ್ಲಿ ಮಧ್ಯಮ ವರ್ಗದ ಜನರಿಗೆ ರೇಷ್ಮೆ ಸೀರೆಯನ್ನು ಸಿಎಂ ಕುಮಾರಸ್ವಾಮಿ ವಿತರಿಸುತ್ತಿದ್ದು, ಮಳೆಯನ್ನು ಲೆಕ್ಕಿಸದೆ ಸೀರೆಗಾಗಿ ಮಹಿಳೆಯರು ಕಾದು ಕುಳಿತ್ತಿದ್ದು ಸಿಎಂ ಮಳೆಯಲ್ಲಿಯೇ ಸೀರೆ ವಿತರಿಸಿದ್ರು. ಮಳೆ ಬಂದ ಕಾರಣ ತರಾತುರಿಯಲ್ಲಿ ಸೀರೆ ವಿತರಿಸಿ ಸಿಎಂ  ಆ ಜಾಗದಿಂದ ಹೊರಟರು. ಸಿಎಂ ಕುಮಾರಸ್ವಾಮಿ ಸೀರೆ ವಿತರಣೆಗೂ ಮುನ್ನ ಗೌರಿ ಗಣೇಶ ಹಬ್ಬದ ಶುಭಾಷಯ ಕೋರಿದ್ರು.

‘ಮೊದಲು ಟೊಕನ್ ಪಡೆದವರಿಗೆ ಸೀರೆ ನೀಡುತ್ತಿದ್ದೇವೆ. ಈಗ 1500 ಸೀರೆಗಳನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಉಳಿದವರಿಗೆ ಆಧಾರ್ ಕಾರ್ಡ್ ಅಡ್ರಸ್ ಮೂಲಕ ನಿಮ್ಮ ಮನೆಗಳಿಗೆ ಸೀರೆ ತಲುಪಿಸುತ್ತೇವೆ’ಎಂದು ಸಚಿವ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ರು.

Leave a Reply

Your email address will not be published.

Social Media Auto Publish Powered By : XYZScripts.com