ವಿಜಯಪುರ : ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು …!

ವಿಜಯಪುರ : ಸುಣ್ಣದ ಡಬ್ಬಿಯನ್ನು ನುಂಗಿ ಒಂಭತ್ತು  ತಿಂಗಳ ಮಗು ಮೃತಪಟ್ಟಿರುವ ಘಟನೆ ವಿಜಯಪುರದ ತ್ರಿಕೋಟಾದಲ್ಲಿ ನಡೆದಿದೆ.

ವಿಜಯಪುರದ ತ್ರಿಕೋಟ ಪಟ್ಟಣದಲ್ಲಿ ವಾಸವಾಗಿದ್ದ ವಿಶ್ವನಾಥ ತಾಳಿಕೋಟೆ ಎಂಬುವರ ಒಂಭತ್ತು ತಿಂಗಳ ಗಂಡು ಮಗು ಮನೆಯಲ್ಲಿ ಆಟವಾಡುತ್ತಿರುವಾಗ ಸುಣ್ಣದ ಡಬ್ಬಿಯನ್ನು ನುಂಗಿ ಮೃತಪಟ್ಟಿದೆ. ಇದನ್ನು ಗಮನಿಸಿ ತಕ್ಷಣವೇ ಆಸ್ಪತ್ರೆಗೆ ಪೋಷಕರು ಮಗುವನ್ನು ಕರೆದೊಯ್ದರು. ವೈದ್ಯರು ಮಗು ನುಂಗಿದ್ದ ಸುಣ್ಣ ಡಬ್ಬಿಯನ್ನ ಹೊರತೆಗೆದರು.

ಆದರೆ, ಡಬ್ಬಿಯಲ್ಲಿದ್ದ ಸುಣ್ಣ ಮಗುವಿನ ದೇಹದಲ್ಲಿ ಸೇರಿಕೊಂಡಿತ್ತು, ಹೀಗಾಗಿ ಮಗು ಮೃತಪಟ್ಟಿತ್ತು ಎನ್ನಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.  ಈ ಘಟನೆಗೆ ಸಂಬಂಧ ಪಟ್ಟಂತೆ ತ್ರಿಕೋಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com