ಮನೆಯಲ್ಲಿ ಕಿಚ್ಚಿದೆ, ಮನಸ್ಸಲ್ಲಿ ಮಚ್ಚಿದೆ :​ ಬಿಗ್​ ಬಾಸ್​-6 ಕಿಚ್ಚ ಸುದೀಪ್​ ಪ್ರೋಮೋ ರಿಲೀಸ್​..!

ಬೆಂಗಳೂರು : ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 6ಗೆ ಎಲ್ಲಾ ತಯಾರಿ ನಡೆಯುತ್ತಿದ್ದು, ಎಲ್ಲರೂ ಕಾದು ನೋಡುತ್ತಿದ್ದು, ಇನ್ನು ಬಿಗ್​ಬಾಸ್​ ಗೆ ಸಂಬಂಧ ಪಟ್ಟಂತೆ ಬಿಗ್​ ಬಾಸ್​ ನಿರೂಪಕ  ನಟ ಕಿಚ್ಚ ಸುದೀಪ್​ರ ಪ್ರೋಮೋ ರಿಲೀಸ್​ ಆಗಿದ್ದು ಕಿಚ್ಚನ ಡೈಲಾಗ್​ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

bigg boss 6 kannada ಗೆ ಚಿತ್ರದ ಫಲಿತಾಂಶ

ಬಿಗ್​ ಬಾಸ್​ನ  5ಸೀಸನ್​ ಗಳು ಅದ್ದೂರಿಯಾಗಿ ಮೂಡಿ ಬಂದಿತ್ತು, ಇದೀಗ 6 ಸೀಸರ್​ ಬರಲು ತಯಾರಿಯಾಗುತ್ತಿದ್ದು, ಬಿಗ್​ ಬಾಸ್​ ಸೀಸರ್​ 6  ಸೆಪ್ಟಂಬರ್ ಕೊನೆಯ ವಾರದಲ್ಲಿ ಆರಂಭವಾಗಲಿರುವ ಈ ಸೀಸನ್​ನಲ್ಲಿ ಒಂದಷ್ಟು ಹೊಸ ಮುಖಗಳ ಪರಿಚಯವಾಗಲಿದೆ.

ಈಗಾಗಲೇ ಬಿಗ್​ ಬಾಸ್- 6 ಗಾಗಿ ನಟ ರವಿಶಂಕರ್, ರ‍್ಯಾಪಿಡ್ ರಶ್ಮಿ, ನಟಿ ನೇಹಾ ಶೆಟ್ಟಿ, ‘ಪುಟ್ಟಗೌರಿ’ ರಂಜನಿ ರಾಘವನ್, ಹಾಗೂ  ಸರಿಗಮಪ ಗಾಯಕ ಚೆನ್ನಪ್ಪ ಹಾಗೂ ಒಗ್ಗರಣೆ ಡಬ್ಬಿ ಮುರಳಿ, ನಟ ಅನಿರುದ್ಧ್ ಹೆಸರುಗಳು ಕೇಳಿ ಬರುತ್ತಿದೆ. ಕಿಚ್ಚ ಸುದೀಪ್​ರ ಪ್ರೋಮೋ ರಿಲೀಸ್​ ಆಗಿದ್ದು, ಮನೆಯಲ್ಲಿ ಕಿಚ್ಚಿದೆ, ಮನಸ್ಸಲ್ಲಿ ಮಚ್ಚಿದೆ ಡೈಲಾಗ್​ ವೈರಲ್​ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹೊಸ ಮನೆಯನ್ನು ತಯಾರು ಮಾರುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com