ತೆಲಂಗಾಣದಲ್ಲಿ ಭೀಕರ ಅಪಘಾತ : ಸರ್ಕಾರಿ ಬಸ್​ ಉರುಳಿ ಬಿದ್ದು 40 ಮಂದಿ ದುರ್ಮರಣ..!

ತೆಲಂಗಾಣ :  ಸರ್ಕಾರಿ ಬಸ್​ ಪಲ್ಟಿ ಹೊಡೆದ ಪರಿಣಾಮ 40 ಮಂದಿ ಮೃತಪಟ್ಟಿದ್ದು, ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೆಲಂಗಾಣದ ಘತ್ರೊದಾದ್ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಕೊಂಡಗಟ್ಟು ಗ್ರಾಮದ ಭದ್ರಾಛಲಂ ನ ಶ್ರೀರಾಮ ದೇವಸ್ಥಾನದ ದರ್ಶನ ಪಡೆದು ಹಿಂತಿರುಗುವಾಗ ಕೆಎಸ್​ ಆರ್’ಟಿಸಿ ಬಸ್ ಪಲ್ಟಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇನ್ನು ಬಸ್​​ನಲ್ಲಿ ಒಟ್ಟು 65ಮಂದಿ ಇದ್ದರು, ಅದರಲ್ಲಿ 40ಮಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು, ಉಳಿದವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಜಗತ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಶರತ್ ಹಾಗೂ ಜಿಲ್ಲಾ ಎಸ್ಪಿ ಸಿಂಧುರಷ್ಮಿ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com