ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಸುದ್ದಿ ನಿಜವೇ.? ಕುಟುಂಬದ ಆಪ್ತ ಮೂಲಗಳು ಹೇಳಿದ್ದೇನು.?

ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ವಿಚಾರ ನಿಜವೇ…? ಹೌದು. ಇಬ್ಬರ ನಡುವೆ ಬ್ರೇಕಪ್ ಸುದ್ದಿ ನಿಜ ಎಂದು ಕುಟುಂಬದ ಆಪ್ತ ಮೂಲಗಳು ಹೇಳುತ್ತಿವೆ.
ಇದು ತೀರ ಖಾಸಗಿ ವಿಚಾರವಾಗಿದ್ದು, ನಮಗೆ ಪ್ರೈವೆಸಿ ಕೊಡಿ ಎಂದ ರಶ್ಮಿಕಾ ಕುಟುಂಬ ಮನವಿ ಮಾಡಿದೆ. ಆದರೆ ಇಬ್ಬರ ಮದುವೆ ಅನುಮಾನ ಎನ್ನುತ್ತಿವೆ ಎರಡೂ ಕುಟುಂಬಗಳ ಆಪ್ತ ಮೂಲಗಳು.

ಗೀತಗೋವಿಂದಂ’ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರೊಂದಿಗೆ ಲಿಪ್‌ಲಾಕ್ ಸೀನ್‌ ನಡೆಸಿದ್ದು, ವಿಪರೀತ ಸುದ್ದಿಯಾಗಿದ್ದು, ಅವರೊಂದಿಗೆ ರಶ್ಮಿಕಾ ಗಪ್ ಚುಪ್ ನಡೆಯುತ್ತಿದೆ ಎಂಬ ಮಾತುಗಳೂ ಕೇಳುತ್ತಿವೆ.

ರಕ್ಷಿತ್ ಮತ್ತು ರಶ್ಮಿಕಾ ಕುಟುಂಬದ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ನಿಶ್ಚಿತಾರ್ಥವನ್ನು ಇಲ್ಲಿಗೆ ಕೈಬಿಡುವ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಬಗ್ಗೆ ಕಠಿಣ ನಿರ್ಧಾರ ಮಾಡುವ ಮುನ್ನ ಇಡೀ ಕುಟುಂಬದವರ ಜೊತೆ ಕೂತು ಮಾತುಕತೆಯನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com