ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವತ್ತಿನ ಪೆಟ್ರೋಲ್ ದರ ಲೀಟರ್ ಗೆ 25.95 ರೂ..!

ನಂಬಿದ್ರೆ ನಂಬಿ, ಬಿಟ್ರೆ ಬಿಡಿ… ಅಂತರಾಷ್ಟ್ರೀಯ ಮಾರುಕಟ್ಠೆಯಲ್ಲಿ ಇಂದು ಒಂದು ಬ್ಯಾರಲ್ ಪೆಟ್ರೋಲ್ ದರ 57.24 ಯು.ಎಸ್. ಡಾಲರ್. ಒಂದು ಬ್ಯಾರಲ್ ಪೆಟ್ರೋಲ್ ಅಂದ್ರೆ 159 ಲೀಟರ್. ಅಂದರೆ ಒಂದು ಲೀಟರ್ ಪೆಟ್ರೋಲ್’ನ್ನು ಕೇಂದ್ರ ಸರಕಾರ 25.95 ರೂ.ಗೆ ಇಂದು ಖರೀದಿಸಿದೆ..! ಆದರೆ ವಾಹನದ ಟ್ಯಾಂಕ್’ಗೆ ಬಂದು ಸುರಿಯುವಾಗ ಬರೋಬ್ಬರಿ 82 ರೂ.ಗಳ ಗಡಿ ದಾಟುತ್ತದೆ. ಹಾಗಾದರೆ ಹೆಚ್ಚುವರಿಯಾಗಿ ಪಡೆಯುವ 52 ರೂ. ವನ್ನು ಜನರಿಂದ ಕೊಳ್ಳೆ ಹೊಡೆಯಲಾಗುತ್ತದೆ. ಸದ್ಯ ಭಾರತೀಯರು ಪ್ರತಿದಿನ 47 ಲಕ್ಷ ಬ್ಯಾರಲ್ ಅಂದ್ರೆ 74.73 ಕೋಟಿ ಲೀಟರ್ ತೈಲವನ್ನು ಬಳಸುತ್ತಿದ್ದಾರೆ. ಹಾಗಾದರೆ ಸರಕಾರದ ಬೊಕ್ಕಸಕ್ಕೆ ಜನಸಾಮಾನ್ಯರು ತುಂಬುತ್ತಿರುವ ರೊಕ್ಕವೆಷ್ಟು ಎಂಬುವುದನ್ನು ನೀವೇ ಲೆಕ್ಕ ಮಾಡಿ.

ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿಸಿದ ಪೆಟ್ರೋಲ್’ಗೆ ಕೇಂದ್ರ ಸರಕಾರ ದೊಡ್ಡ ಮೊತ್ತದ ಅಬಕಾರಿ ಸುಂಕ ವಿಧಿಸುತ್ತದೆ. ಅದರ ಮೇಲೆ ಪುನಃ ಶೇಕಡಾ 21 ರಷ್ಟು ಮೌಲ್ಯವರ್ಧಿತ ತೆರಿಗೆ ಅಂಟಿಕೊಳ್ಳುತ್ತದೆ. ನಮಗೆ ಪೆಟ್ರೋಲ್ ನೀಡುವ ಡೀಲರ್ಸ್ ಶೇಕಡಾ 4 ರಿಂದ 5 ರಷ್ಟು ಕಮಿಷನ್ ಪಡೆಯುತ್ತಾರೆ. ಹೀಗೇ 25.95 ರ ಪೆಟ್ರೋಲ್ ನಮ್ಮ ಕೈಯ್ಯನ್ನು 82 ಕ್ಕೂ ಅಧಿಕ ರೂ. ಪಡೆದು ಸುಡುತ್ತದೆ. ಜುಲೈ 2014ರಲ್ಲಿ ಒಂದು ಬ್ಯಾರಲ್ ತೈಲಕ್ಕೆ 106 ಯು.ಎಸ್. ಡಾಲರ್ ನೀಡಲಾಗುತ್ತಿತ್ತು. ಪ್ರಸ್ತುತ 57.24 ಡಾಲರ್ ಇದೆಯಷ್ಟೆ. ಹಾಗಾದರೆ ಇಂದಿನ ಧಾರಣೆ ಎಷ್ಟಿರಬೇಕಿತ್ತು ಎಂಬುವುದನ್ನು ಊಹಿಸಿ.

ನಮ್ಮ ನೆರೆಯ ದೇಶ ಶ್ರೀಲಂಕಾಕ್ಕೆ ಭಾರತ ಪೆಟ್ರೋಲ್ ಮಾರಾಟ ಮಾಡುತ್ತದೆ. ಆದರೆ ಅಲ್ಲಿ ಇಂದು ಪೆಟ್ರೋಲ್ ಲೀಟರೊಂದಕ್ಕೆ 64 ರೂ. ಮಾತ್ರ..! ನಮ್ಮಲ್ಲಿ ರೂ. 82/83. ಇದು ವಿಶೇಷ. ನೆರೆಯ ದೇಶಗಳಾದ ಪಾಕಿಸ್ತಾನದಲ್ಲಿ 55 ರೂ. ನೇಪಾಳದಲ್ಲಿ 69.71 ರೂ. ಹಾಗೂ ಬಾಂಗ್ಲಾದಲ್ಲಿ 73.91 ರೂ. ಇರುವಾಗ ನಮ್ಮ ರಾಷ್ಟ್ರದಲ್ಲಿ ಮಾತ್ರ ಈ ಪರಿ ಏರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಕೇಂದ್ರ ಸರಕಾರದಲ್ಲೇ ಉತ್ತರವಿದೆ. ಕೇಂದ್ರ ಸರಕಾರದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಸರಕಾರಕ್ಕೆ ಸರಿಯಾದ ಆರ್ಥಿಕ ತಜ್ಞರ ಸಲಹೆ ಬೇಕು. ಜೊತೆಗೆ ಸೇವಾ ಮನೋಭಾವವೂ ಬೇಕು. ಕಾರ್ಪೊರೇಟರ್’ಗಳ ಕೈಗೊಂಬೆಯಾದರೆ ಭಾರತ ಮುಂದೊಂದು ದಿನ ಅಡವು ಇಡಬೇಕಾದ ದುಸ್ಥಿತಿಗೆ ತಲುಪುವ ಭಯವಿದೆ.

Leave a Reply

Your email address will not be published.