ಚಿಕ್ಕಮಗಳೂರು : ಅಕ್ರಮ ಸಂಬಂಧ ಹಿನ್ನೆಲೆ – ಪತ್ನಿಯ ತಲೆ ಕಡಿದು ಪೊಲೀಸ್ ಸ್ಟೇಷನ್‍ಗೆ ತಂದ ಭೂಪ

ಚಿಕ್ಕಮಗಳೂರು : ವ್ಯಕ್ತಿಯೊಬ್ಬ ತನ್ನ ಹೆಂಡತಿಯ ತಲೆ ಕಡಿದು ಪೊಲೀಸ್ ಸ್ಟೇಷನ್‍ಗೆ ತಂದಿರುವ ಘಟನೆ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಪತ್ನಿಯ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿರಾಐ ತಲೆ ಕಡಿದಿದ್ದಾನೆ.

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸತೀಶ್, ಹೆಂಡತಿಯ ಅಕ್ರಮ ಸಂಬಂಧ ಕಣ್ಣಾರೆ ಕಂಡು ಆಕ್ರೋಶಗೊಂಡು ಕೊಲೆ ಮಾಡಿದ್ದಾನೆ. ತಲೆಯನ್ನ ಬ್ಯಾಗ್‍ನಲ್ಲಿಟ್ಟುಕೊಂಡು 20 ಕಿ.ಮೀ. ಬಸ್ ಸಂಚಾರ ಮಾಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದ ಸತೀಶ್ ಕತ್ತಿ ಹಾಗೂ ತಲೆ ಎರಡನ್ನೂ ಸ್ಟೇಷನ್‍ಗೆ ತಂದಿದ್ದಾನೆ. ಹೆಂಡತಿಯ ತಲೆಯೊಂದಿಗೆ ಠಾಣೆಗೆ ಬಂದು ಸರಂಡರ್ ಆಗಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com