US Open tennis : ಮೂರನೇ ಬಾರಿ ಯುಎಸ್ ಓಪನ್ ಗ ಮುತ್ತಿಟ್ಟ ಜೊಕೊವಿಚ್..

novak-djokovic-won-us-open, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸವಾಲನ್ನು 6-3, 7-6 (4), 6-3 ನೇರ ಸೆಟ್‍ಗಳಿಂದ ಸದೆಬಡಿದ ಅನುಭವಿ ಆಟಗಾರ ನೊವಾಕ್ ಜೊಕೊವಿಕ್ ಅವರು ರವಿವಾರ ರಾತ್ರಿ ಮೂರನೇ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.


ಇದು ಇವರಿಗೆ 14ನೇ ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿಯಾಗಿದ್ದು, ಇದರೊಂದಿಗೆ ಅತಿಹೆಚ್ಚು ಗ್ರ್ಯಾಂಡ್‍ಸ್ಲಾಂ ಸಿಂಗಲ್ಸ್ ಗೆದ್ದ ಆಟಗಾರರ ಪೈಕಿ ಪೀಟ್ ಸಾಂಪ್ರಸ್ ಜತೆ ಮೂರನೇ ಸ್ಥಾನಕ್ಕೆ ನೆಗೆದೇರಿದರು. ಆಸ್ಟ್ರೇಲಿಯಾ ಓಪನ್ ಬಳಿಕ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 31 ವರ್ಷದ ಸೆರ್ಬಿಯನ್ ಆಟಗಾರ  ಅಂಕಣಕ್ಕೆ ಮರಳಿದ ಬಳಿಕ ಜೊಕೊವಿಕ್, ಸತತ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಮೂರನೇ ಪ್ರಶಸ್ತಿ ಗೆದ್ದರು.

ಇದಕ್ಕೂ ಮುನ್ನ ಪ್ರಸಕ್ತ ಋತುವಿನಲ್ಲಿ ವಿಂಬಲ್ಡನ್ ಮತ್ತು ಫ್ಲಶಿಂಗ್ ಮೆಡೋಸ್ ಪ್ರಶಸ್ತಿಗೆ ಜೊಕೊವಿಕ್ ಪಾತ್ರರಾಗಿದ್ದರು. 2016ರ ಇದೇ ಅವಧಿಯಲ್ಲಿ ಜೊಕೊವಿಕ್ ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಗ್ರ್ಯಾಂಡ್‍ಸ್ಲಾಂ ಮಿಷಿನ್ ಎನಿಸಿಕೊಂಡಿದ್ದರು.

ಮಹಿಳಿಯರ ಯುಎಸ್ ಓಪನ್ ಕಿರೀಟವನ್ನು ಅಮೆರಿಕಾದ ಸರನಾ ವಿಲಿಯ್ಸ್ಂರನ್ನು ಮಣಿಸಿದ ಜಪಾನದ ನೋಮಿ ಓಸಾಕ ತಮ್ಮದಾಗಿಸಿಕೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com