ದೇಶದ ಇಂದಿನ ಆರ್ಥಿಕ ದುಸ್ಥಿತಿಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ : ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ : ದೇಶದ ಇಂದಿನ ಆರ್ಥಿಕ ದುಸ್ಥಿತಿಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ‘ ಎಂದು ಕಲಬುರಗಿಯಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

‘ ಉಗ್ರವಾದ, ಭ್ರಷ್ಟಾಚಾರ, ಕಪ್ಪು ಹಣ ನಿಗ್ರಹಕ್ಕೆ ನೋಟ್‌ಬ್ಯಾನ್ ಮಾಡಿದ್ದೇವೆ ಎಂದರು. ನೋಟ್‌ಬ್ಯಾನ್‌ನಿಂದ ಮಾಡಿದ ಹಣ 98.33 ಬ್ಯಾಂಕಿಂಗ್ ಹಣ ವಾಪಸ್ ಬಂದಿದೆ. ಇದನ್ನು ಆರ್‌ಬಿಐದವರೇ ಒಪ್ಪಿಕೊಂಡಿದ್ದಾರೆ. ಕಪ್ಪು‌ಹಣ ತಡೀತೆವೆ ಎಂದವರೂ ಅದನ್ನು ಸರಿಪಡಿಸಲಿಲ್ಲ ‘ ಎಂದಿದ್ದಾರೆ.

‘ ಇಷ್ಟೊಂದು ಸುಳ್ಳು ಹೇಳಿ ಅಧಿಕಾರ ನಡೆಸುವ ಅವಶ್ಯಕತೆ ಇಲ್ಲ. ಪ್ರತಿಯೊಂದಕ್ಕೂ ಕಾರಣವನ್ನೇ ಹೇಳಿಕೊಳ್ಳುತ್ತಾ ಹೊರಟಿದ್ದಾರೆ. ಎಲ್ಲಾ ಟಿವಿ ಮಾಧ್ಯಮ, ಪತ್ರಿಕಾ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ‘ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com