ಭಾರತ ಬಂದ್ ಕರೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟಿದ್ದೇವೆ : ಎಚ್.ಕೆ ಪಾಟೀಲ್

ಗದಗ : ಭಾರತ್ ಬಂದ್ ಹಿನ್ನೆಲೆಯಲ್ಲಿ ಗದಗನಲ್ಲಿ ಶಾಸಕ ಎಚ್.ಕೆ.ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗದ ಎಚ್ಚರಿಕೆ ನೀಡಿದ್ದಾರೆ.  ‘ ಈಗಾಗ್ಲೆ ಬಿಜೆಪಿ ದುರಾಡಳಿತದ ವಿರುದ್ಧ ಲೋಕಸಭೆಯಲ್ಲಿ ನಮ್ಮ ಹೋರಾಟ ಮಾಡಿದ್ದೇವೆ. ಆದ್ರೆ ಬ್ರಹ್ಮಾಸ್ತ್ರ ಬಳಕೆ ಪ್ರಸಂಗಕ್ಕೆ ತಕ್ಕಂತೆ ಮಾಡಬೇಕು. ಈಗ ಬ್ರಹ್ಮಾಸ್ತ್ರ ಪ್ರಯೋಗದ ಸಮಯ ಕೂಡಿ ಬಂದಿದೆ ‘ ಎಂದಿದ್ದಾರೆ.

‘ ದೇಶದ ಹಿತಕ್ಕಾಗಿ ಕೇಂದ್ರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗದ ಅನಿವಾರ್ಯತೆ ಇದೆ. ಭಾರತ ಬಂದ್ ಕರೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟಿದ್ದೇವೆ. ಕಾಂಗ್ರೆಸ್ ಬ್ರಹ್ಮಾಸ್ತ್ರವೆಂದರೆ ಜನಶಕ್ತಿಯ ಬ್ರಹ್ಮಾಸ್ತ್ರವಿದ್ದಂತೆ. ಕಾಂಗ್ರೆಸ್ ನ ಈ ಬ್ರಹ್ಮಾಸ್ತ್ರ ಮೋದಿ ಅವರ ಮೇಲಷ್ಟೆ ಅಲ್ಲ ಬೇರೆ ಯಾರಿದ್ದರೂ ಅವರ ಮೇಲೆ ಪರಿಣಾಮ ಬೀರುತ್ತೆ ‘ ಎಂದಿದ್ದಾರೆ.

‘ ಮೋದಿ ಮಾದ್ಯಮ ಹಾಗೂ ಕಾರ್ಪೋರೇಟ್ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಇದಕ್ಕೆ ಮೋದಿ ಸ್ಪಂದಿಸದಿದ್ರೆ ಈ ಧೋರಣೆ ವಿರುದ್ಧ ಮೊತ್ತೊಂದು ಬ್ರಹ್ಮಾಸ್ತ್ರ ಬಿಡಲಿದ್ದೇವೆ ‘ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com