ಹುಬ್ಬಳ್ಳಿ : ಬಂದ್ ವೇಳೆ ಹೊಟೇಲ್ ನುಗ್ಗಿ ದಾಂಧಲೆ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಅಮಾನತು.!

ಹುಬ್ಬಳ್ಳಿ : ಭಾರತ ಬಂದ್ ಹಿನ್ನೆಲೆಯಲ್ಲಿ ಹೊಟೆಲ್ ಗೆ ನುಗ್ಗಿ ದಾಂಧಲೆ ಮಾಡಿದ್ದ ಕೈ ಕಾರ್ಯಕರ್ತರನ್ನು ಅಮಾನತು ಮಾಡಲಾಗಿದೆ. ಹುಬ್ಬಳ್ಳಿಯಲ್ಲಿಂದು ಬೆಳಿಗ್ಗೆ ಬಂದ್ ಮಾಡುವ ವೇಳೆ ಈ ಘಟನೆ ನಡೆದಿತ್ತು. ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಮುಖಂಡ ಅಮಾನತು ಮಾಡಿದ್ದಾರೆ.

ಬಲವಂತವಾಗಿ ಹೊಟೆಲ್ ಬಂದ್ ಮಾಡಿಸಿ ದಾಂಧಲೆ ನಡೆಸಿದ್ದರು. ಈ ಕುರಿತು ಮಾಧ್ಯಮದಲ್ಲಿ ವರದಿ ಪ್ರಸಾರವಾಗಿತ್ತು. ಹುಬ್ಬಳ್ಳಿ ಧಾರವಾಡ ನಗರದ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ರಾಯನಗೌಡ್ರ ಅಮಾನತು ಆದೇಶ ಹೊರಡಿಸಿದ್ದಾರೆ.

ದಾಂಧಲೆ ನಡೆಸಿದ ಕಾರ್ಯಕರ್ತರಾದ ಪ್ರವೀಣ್ ಶಲವಡಿ, ಇಮ್ರಾನ್ ಕಡೂರು ಹಾಗೂ ನಾಗಾರ್ಜುನ ಕತ್ರಿಮಲ್ ಅವರನ್ನು ಅಮಾನತು ಮಾಡಲಾಗಿದೆ.

Leave a Reply

Your email address will not be published.