Cricket : 5ನೇ ಟೆಸ್ಟ್ : ಭಾರತಕ್ಕೆ ಜಡೇಜಾ, ವಿಹಾರಿ ಆಸರೆ – ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್

ಲಂಡನ್ನಿನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೇಲೆ ಆತಿಥೇಯ ಇಂಗ್ಲೆಂಡ್ ಹಿಡಿತ ಸಾಧಿಸಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 293ಕ್ಕೆ ಆಲೌಟ್ ಆಗುವ ಮೂಲಕ 40 ರನ್ ಹಿನ್ನಡೆ ಅನುಭವಿಸಿತು.

ಸರಣಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿರುವ ರವೀಂದ್ರ ಜಡೇಜಾ 86 ಹಾಗೂ ಪಾದಾರ್ಪಣೆ ಪಂದ್ಯವನ್ನಾಡುತ್ತಿರುವ ಹನುಮ ವಿಹಾರಿ 56 ರನ್ ಗಳಿಸಿ ಆಸರೆಯಾದರು. ಇಂಗ್ಲೆಂಡ್ ಪರವಾಗಿ ಜೇಮ್ಸ್ ಆ್ಯಂಡರ್ಸನ್, ಬೆನ್ ಸ್ಟೋಕ್ಸ್ ಹಾಗೂ ಮೋಯಿನ್ ಅಲಿ ತಲಾ 2 ವಿಕೆಟ್ ಪಡೆದರು.

ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿದೆ. ವಿದಾಯದ ಪಂದ್ಯವನ್ನಾಡುತ್ತಿರುವ ಅಲಿಸ್ಟರ್ ಕುಕ್ (46*) ಹಾಗೂ ಜೋ ರೂಟ್ (29*) ಅಜೇಯರಾಗುಳಿದಿದ್ದು ಕ್ರೀಸ್ ನಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com