Cricket : ಕೆಸಿಸಿ 2018 – ಗಣೇಶ್ ನೇತೃತ್ವದ ‘ಒಡೆಯರ್ ಚಾರ್ಜರ್ಸ್’ ಮಡಿಲಿಗೆ ಟ್ರೋಫಿ

ರವಿವಾರ ನಡೆದ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ 6 ವಿಕೆಟ್ ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಮ್ಯಾಚ್ ನಲ್ಲಿ ಒಡೆಯರ್ ಚಾರ್ಜರ್ಸ್ ತಂಡ ರಾಕಿಂಗ್ ಸ್ಟಾರ್ ಯಶ್ ಮುಂದಾಳತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿತು.

ಮೊದಲು ಬ್ಯಾಟ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ 10 ಓವರುಗಳಲ್ಲಿ 122 ರನ್ ಮೊತ್ತ ದಾಖಲಿಸಿತು. ಗುರಿಯನ್ನು ಬೆನ್ನತ್ತಿದ ಒಡೆಯರ್ ಚಾರ್ಜರ್ಸ್ 10 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 127 ರನ್ ಸೇರಿಸಿ ಜಯ ಸಾಧಿಸಿತು. ಚಾರ್ಜರ್ಸ್ ಪರವಾಗಿ ತಿಲಕರತ್ನೆ ದಿಲ್ಶಾನ್ 3 ವಿಕೆಟ್ ಪಡೆದಿದ್ದೂ ಅಲ್ಲದೇ, 68 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 

 

 

Leave a Reply

Your email address will not be published.

Social Media Auto Publish Powered By : XYZScripts.com