ಕನ್ನಡಕ್ಕೆ ಡಬ್ ಆಗಲಿದೆ ಕಿಚ್ಚ ಸುದೀಪ್ ಅಭಿನಯದ ಚಿತ್ರ ‘ಸೈರಾ ನರಸಿಂಹ ರೆಡ್ಡಿ’

ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಕಿಚ್ಚ ಸುದೀಪ್ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೌದು. ಡಬ್ಬಿಂಗ್ ಚಿತ್ರಗಳು ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದರಿಂದ ಸಾಕಷ್ಟು ಚಿತ್ರಗಳನ್ನು ಡಬ್ಬಿಂಗ್ ಮಾಡಲು ಚಿತ್ರ ನಿರ್ಮಾಪಕರು ಮನಸ್ಸು ಮಾಡುತ್ತಿದ್ದಾರೆ. ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಕಿಚ್ಚ ಸುದೀಪ್ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಬಾಹುಬಲಿ ಮತ್ತು ರುದ್ರಮ್ಮದೇವಿ ಸಿನಿಮಾಗಳು ಕೂಡ ಕನ್ನಡಕ್ಕೆ ಡಬ್ ಆಗುವ ಸಾಧ್ಯತೆ ಇತ್ತು. ಆದ್ರೆ ಸಂದರ್ಭ, ಸನ್ನಿವೇಶ ಅದಕ್ಕೆ ಪೂರಕವಾಗಿ ಇರಲಿಲ್ಲ. ಇದೀಗ ಕಮಾಂಡೋ ಸಿನಿಮಾಗೆ ಸಿಕ್ಕಿರುವಂತಾ ಪ್ರತಿಕ್ರಿಯೆ ಪರಭಾಷಾ ಸಿನಿಮಾಗಳ ಡಬ್ಬಿಂಗ್ ಗೆ ಇರುವ ಆತಂಕವನ್ನು ದೂರ ಮಾಡಿದೆ. ಇದು ಡಬ್ಬಿಂಗ್ ಗೆ ಪೂರಕ ವಾತಾವರಣ ಎನ್ನಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com