ಭಾರತ್ ಬಂದ್ : ಪ್ರಧಾನ ಸೇವಕರೇ ಕೇಳಿಸಿಕೊಳ್ಳಿ.. ಇದು ಜನ್ ಕೀ ಬಾತ್..

ಭಾರತ್ ಬಂದ್ : ಜನ್ ಕೀ ಬಾತ್
-ಪಿ.ಕೆ ಮಲ್ಲನಗೌಡರ್
1. ಪ್ರಧಾನಸೇವಕರು ನಾಲ್ಕೂವರೆ ವರ್ಷ ತಮಗನಿಸಿದ್ದನ್ನು ‘ಮನ್ ಕೀ ಬಾತ್’ನಲ್ಲಿ ಕೊರೆದೇ ಕೊರೆದರು. ಆದರೆ ಜನರ ಸಂಕಷ್ಟವೇನು ಎಂದು ಅವರು ಕೇಳಲೇ ಇಲ್ಲ. ನೋಟು ಅಮಾನ್ಯೀಕರಣದಿಂದ ಬಡವರು, ಅಸಂಘಟಿತ ವಲಯದ ಕಾರ್ಮಿಕರು, ಸಣ್ಣ ಕಾರ್ಖಾನೆಗಳ ಮಾಲಿಕರಿಗೆ ಬಿದ್ದ ಹೊಡೆತದ ಕುರಿತು ಮನ್ ಕೀ ಬಾತ್‍ನಲ್ಲಿ ಪ್ರಸ್ತಾಪವೇ ಇಲ್ಲ. ಈಗ ಕೇಳುವ ಸರದಿ ನಿಮ್ಮದು ಪ್ರಧಾನಸೇವಕರೇ, ಕೇಳಿಸಿಕೊಳ್ಳಿ, ಇದು ಜನ ಕೀ ಬಾತ್!
ಯಪ್ಪಾ ಸಾಕೋ ಮನ್ ಕೀ ಬಾತ್
ಕೇಳೋ ನಮ್ದೂ ಒಂದಿಷ್ಟ್ ಮಾತ್
ಅಬ್ ಬಂದ್ ಕರೋ ಮನ್ ಕೀ ಬಾತ್
ಜರಾ ಸುನ್‍ಲೋ ಥೋಡಾ ಹಮಾರಿ ಬಾತ್

Image result for modi upset

2. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದರೆ ಪ್ರಧಾನಸೇವಕರು ವಿರಾಟ್ ಕೊಹ್ಲಿಯೊಂದಿಗೆ ‘ಫಿಟ್‍ನೆಸ್’ ಆಟದಲ್ಲಿ ಮೈಮರೆಯುತ್ತಾರೆ, ಅಥವಾ ಹಾಗೆ ಡ್ರಾಮಾ ಮಾಡುತ್ತಾರೆ. ಡಾಲರ್ ಎದುರು ರೂಪಾಯಿ ಮಕಾಡೆ ಮಲಗುತ್ತಿರುವಾಗ ಪ್ರಧಾನಸೇವಕರು ‘ಸ್ಟ್ಯಾಂಡ್-ಅಪ್ ಇಂಡಿಯಾ’ ಎನ್ನುತ್ತಾರೆ! ರೂಪಾಯಿಯೇ ಮಲಗಿ, ಪೆಟ್ರೋಲ್ ಡಿಸೇಲ್ ಬೆಲೆ ಆಕಾಶ ತಲುಪಿರುವಾಗ ‘ಎದ್ದೇಳು’ ಎಂದು ಹೇಳಿದರೆ, ನಿತ್ರಾಣವೂ ಇರದ ಜನತೆ ನಿಲ್ಲಲು ಆಗುತ್ತಾ ‘ವಿಶ್ವಗುರು’? ’ಭಾರತ್ ಬಂದ್’ ದಿನವಾದರೂ ಈ ಜನ್ ಕೀ ಬಾತ್ ಕೇಳಿಸಿಕೊಳ್ಳಿ.
ಪೆಟ್ರೋಲ್ ಹೊಡಿತೈತೆ ಸೆಂಚೂರಿ
ರೂಪಾಯಿ ಕಿಸ್ಮತ್ ಮಜ್‍ಬೂರಿ
ಪೆಟ್ರೋಲ್ ಖೇಲ್ ಮೆ ಮೋದಿ ಕಾ ಸೆಂಚೂರಿ
ರೂಪಾಯ್ ಕೋ ಬನ್‍ದಿಯಾ ಮಜ್‍ಬೂರಿ
—————————————-
ಪೆಟ್ರೋಲ್, ಡಿಸೇಲ್, ರಫೇಲ್
ಶುರುವಾತಪ್ಪ ವಿನಾಶ್‍ಕಾಲ್

Image result for modi upset

3. ಎಲ್ಲರ ಜೊತೆ, ಎಲ್ಲರ ವಿಕಾಸ ಎಂದು ಪ್ರಧಾನಸೇವಕರು ಶಂಖನಾದ ಹೊರಡಿಸುತ್ತಲೇ ಬಂದರು. ಅವರ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರನ್ನು ಮೂರನೇ ದರ್ಜೆಯ ನಾಗರಿಕರಂತೆ ಡೆಸಿಕೊಳ್ಳುವ ಕ್ರೌರ್ಯ ಪ್ರಧಾನಸೇವಕರಿಗೆ ಕಾಣಲೇ ಇಲ್ಲ. ಅಲ್ಪಸಂಖ್ಯಾತರು, ದಲಿತರ ಕೊಲೆಗಳು, ಹಲ್ಲೆಗಳು, ಮಹಿಳೆಯರ ಅತ್ಯಾಚಾರ-ಕೊಲೆಗಳು ಪ್ರಧಾನಸೇವಕರನ್ನು ಅಲುಗಾಡಿಸಲೇ ಇಲ್ಲ. ‘ಸಬ್ ಕಾ ಸಾಥ್’ ಅಂದರೆ ಕೇವಲ ‘ಸಂಘ್ ಕಾ ಸಾಥ್’ ಅಂತ ಇರಬಹುದೇ?
ಸಬ್ ಕಾ ಸಾಥ್ ಸಬ್ ಕಾ ವಿಕಾಸ್
ಸಂಘ್ ಕಾ ಸಾಥ್ ಸಬ್ ಕಾ ವಿನಾಶ್
4. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದರು. ‘ಮೇಕ್ ಇನ್ ಇಂಡಿಯಾ’ ಎನ್ನುತ್ತಲೇ ಬ್ಯಾಂಕುಗಳಿಂದ ಸಾವಿರ ಕೋಟಿಗಳನ್ನು ವಿಜಯ್ ಮಲ್ಯ, ನೀರವ್ ಮೋದಿಗಳು ವಿದೇಶಕ್ಕೆ ಹೊತ್ತೊಯ್ಯುವಾಗ 56 ಇಂಚಿನ ಎದೆಯ ಚೌಕಿದಾರ್ ಕಳ್ಳನಿದ್ದೆಯಲ್ಲಿದ್ದರು. ಯುವಕರು ‘ಉದ್ಯೋಗ, ರೋಜಗಾರ್’ ಎಂದು ಕೂಗುತ್ತಿದ್ದರೆ ಪ್ರಧಾನಸೇವಕರು ಎಲ್ಲಿ ಹೋದರು?
ಚೌಕಿದಾರ್ ಕ್ಯೂಂ ಮೌನ್ ಹೈ?
ಪಕೋಡ ಪಖಾತೆ ಬೈಠಾ ಹೈ!
5. ವಿದೇಶದಲ್ಲಿನ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಎಂದಿದ್ದ ಪ್ರಧಾನಸೇವಕರು ಗೆದ್ದ ಮೇಲೆ ಆ ಕುರಿತು ಮಾತೇ ಆಡುವುದನ್ನು ಬಿಟ್ಟರು! ಇದ್ದ ಕಪ್ಪು ಹಣವನ್ನೆಲ್ಲ ಬಿಳಿ ಮಾಡಿಕೊಟ್ಟರು. ಈಗ 15 ಲಕ್ಷವನ್ನು ಡಿಜಿಟಲ್ ಕ್ಯಾಷ್‍ನಲ್ಲಿ ಕೊಡುತ್ತಾರೋ, ಅಥವಾ ಕ್ಯಾಷ್‍ಲೆಸ್ ಸೊಸೈಟಿ ಅಂತ ‘ಬಾಂಬೇ’ ತೋರಿಸ್ತಾರೋ. ಪಂದ್ರಾಲಾಖ್ ಈಗ ಜನರ ಬಾಯಲ್ಲಿ ಜೋಕ್ ಆಗಿ ಹೋಗಿದೆ ಪ್ರಧಾನಸೇವಕರೇ!
ಆಯಾರೇ ಆಯಾರೇ ಪಂದ್ರಾ ಲಾಖ್
ಜಲ್ದಿ ಜಲ್ದಿ ಜೇಬ್ ಮೆ ರಖ್
ಬಂತಲೇ ಬಂತಲೇ ಪಂದ್ರಾ ಲಾಖ್
ಜಲ್ದಿ ಜಲ್ದಿ ಜೇಬಿಗೆ ಹಾಕ್
————————
ಬಂತಲೇ ಬಂತಲೇ ಪಂದ್ರಾ ಲಾಖ್
ಜನ್‍ಧನ್ ಅಕೌಂಟಿಗೆ ಜಲ್ದಿ ಹಾಕ್

Leave a Reply

Your email address will not be published.