ಗದಗ : ಬಂದ್ ಪ್ರಯುಕ್ತ ಬಸ್ ಸಂಚಾರ ಸ್ಥಗಿತ – ಆಂಧ್ರ ಮೂಲದ ರೋಗಿಯ ಪರದಾಟ

ಗದಗ : ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮೂಲದ ರೋಗಿಯೊಬ್ಬ ಬಸ್ ನಿಲ್ದಾಣದಲ್ಲಿ ಪರದಾಡಿದ ಘಟನೆ ನಡೆದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸೊರಟೂರ ಗ್ರಾಮ ಚಿಕಿತ್ಸೆಗಾಗಿ ಆಗಮಿಸಿದ ಆಂಧ್ರ ಮೂಲದ ರೋಗಿ ಪೆನ್ನಪ್ಪ ಸೊರಟೂರ ಗ್ರಾಮಕ್ಕೆ ಹೋಗಲು ಬಸ್ ಇಲ್ಲದೇ ಪರದಾಡಿದ್ದಾನೆ.

ಪಾರ್ಶ್ವವಾಯು ಚಿಕಿತ್ಸೆಗೆ ಆಗಮಿಸಿದ ಪೆನ್ನಪ್ಪ ಭಾಷೆ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವಿಯತೇ ಮೆರೆದಿದ್ದಾರೆ.

 

 

 

One thought on “ಗದಗ : ಬಂದ್ ಪ್ರಯುಕ್ತ ಬಸ್ ಸಂಚಾರ ಸ್ಥಗಿತ – ಆಂಧ್ರ ಮೂಲದ ರೋಗಿಯ ಪರದಾಟ

Leave a Reply

Your email address will not be published.

Social Media Auto Publish Powered By : XYZScripts.com