ನಾಳೆಯ ಭಾರತ್​ ಬಂದ್​ ಬಗ್ಗೆ ಹೆಚ್​. ಡಿ. ದೇವೇಗೌಡ್ರು ಹೇಳಿದ್ದೇನು..?

ಹಾಸನ : ನಿರಂತರ ಇಂಧನ ದರ ಏರಿಕೆ ವಿರೋಧಿಸಿ ನಾಳೆ ಕರೆ ನೀಡಿರುವ ದೇಶವ್ಯಾಪಿ ಬಂದ್​​ಗೆ ಹಾಸನ ಜಿಲ್ಲೆಯಲ್ಲೂ ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನು ಬಂದ್​ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಸಂಪೂರ್ಣ ಬೆಂಬಲ​ ನೀಡಿದ್ದಾರೆ.

ಭಾರತ್​ ಬಂದ್ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ‘ಬಂದ್ ಗೆ ತಮ್ಮ ಸಂಪೂರ್ಣ ಬೆಂಬಲ ಇದೆ. ದೇಶದಲ್ಲಿ ಬಿಜೆಪಿ ಹೊರತು ಪಡಿಸಿದ ಪ್ರಾದೇಶಿಕ ಪಕ್ಷಗಳು ಬಂದ್ ಗೆ ಬೆಂಬಲಿಸಿದ್ದಾರೆ. ನಮ್ಮ ಪಕ್ಷವೂ ಕೂಡ ಬಂದ್ ಗೆ ಬೆಂಬಲ ನೀಡಿದೆ. ಇನ್ನ ನಾನು, ಸಿಎಂ ಕುಮಾರಸ್ವಾಮಿ ನಾಳೆ ದೆಹಲಿಗೆ ಹೋಗುತ್ತಿದ್ದೇವೆ’ ಎಂದು ತಿಳಿಸಿದ್ರು.

‘ದಿನದಿಂದ ದಿನಕ್ಕೆ ತೈಲಬೆಲೆ ಗಗನಕ್ಕೆ ಏರುತ್ತಿರುವುದರಿಂದ ಶ್ರೀಸಾಮಾನ್ಯನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರೈತರು, ಜನಸಾಮಾನ್ಯರ ಜೀವನ ಕಷ್ಟವಾಗಿದೆ. ಇಂಧನ ದರ ಏರಿಕೆಯಿಂದ ಸರಕು ಸಾಗಣೆ ದರ ಹೆಚ್ಚಾಗಿ ಗ್ರಾಹಕರಿಗೆ ಹೊರೆಯಾಗಿದೆ. ಈ ಎಲ್ಲಾ ಕಾರಣದಿಂದ ಭಾರತ್ ಬಂದ್ ಗೆ ಸಹಾಯ ಮಾಡಲು ತೀರ್ಮಾನ ಮಾಡಲಾಗಿದೆ’ ಎಂದು ಹೆಚ್​ ಡಿಡಿ ತಿಳಿಸಿದ್ದಾರೆ.

‘ಜೆಡಿಎಸ್, ಕಾಂಗ್ರೆಸ್ ಜೊತೆಗೆ ಲಾರಿ ಮಾಲೀಕರ ಸಂಘ, ಆಟೋ ಸಂಘ ಸೇರಿ ಹಲವು ಸಂಘಟನೆಗಳು ನಾಳಿನ ಬಂದ್ ಗೆ ಸಹಕಾರ ನೀಡುವುದಾಗಿ ಹೇಳಿದ್ದಿ ಈಗಾಗಲೇ ಸಾರಿಗೆ ಬಸ್ ನಿಂದ ಸಂಪೂರ್ಣ ಬೆಂಬಲ ನೀಡಿರುವುದರಿಂದ ನಾಳೆ ಶಾಲಾ ಕಾಲೇಜೂ ಬಂದ್ ಆಗುವ ಸಾಧ್ಯತೆ ಹೆಚ್ಚಿದ್ದು, ಸೆಪ್ಟಂಬರ್ 10 ರ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com