ಗಂಡುಮೆಟ್ಟಿದ ನಾಡಲ್ಲಿ ಒಬ್ಬನಿಗಾಗಿ ಮೂರು ಹುಡುಗಿಯರ ಹೊಡೆದಾಟ : ವಿಡಿಯೋ ವೈರಲ್​…!

ಹುಬ್ಬಳ್ಳಿ : ಹುಡಿಗಿಗಾಗಿ ಹುಡುಗ್ರು ಕಿತ್ತಾಡಿಕೊಳ್ಳೋದು ಇಲ್ಲ ಕೊಲೆ ಮಾಡಿರೋದನ್ನ ನೋಡಿದ್ದೇವೆ.‌ ಆದರೆ ಇದೆಂಥಾ ಕಾಲ ಬಂತು ನೋಡಿ, ಒಬ್ಬ ಹುಡುಗನಿಗಾಗಿ ಮೂವರು ಹುಡುಗಿಯರು ಹೊಡೆದಾಡಿಕೊಂಡಿತ್ತಿದನ್ನು ನೋಡಿದ್ದಾರೆ ಗಂಡು ಮೆಟ್ಟಿದ್ದ ನಾಡು ಹುಬ್ಬಳ್ಳಿಯಲ್ಲಿ ಹುಡುಗರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಅನ್ನಿಸುತ್ತಾದೆ. ಇನ್ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಸುತ್ತುವರೆದ ಮೂವರು ಹುಡುಗಿಯರು ಇವನು ನನ್ನ ಬಾಯ್ ಫ್ರೆಂಡ್ ಅಂತ ಮೂವರು ಹುಡುಗಿಯರು ಹೊಡೆದಾಡಿಕೊಂಡಿದ್ದಾರೆ. ಇನ್ನು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಮುಂಭಾಗದಲ್ಲಿ ನಡೆದಿದ್ದು, ಇವರು ಯಾರು? ಯಾಕೆ ಹೊಡೆದಾಡುತ್ತಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದ್ರೇ, ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಮೂವರು ಹುಡುಗಿಯರು ಒಬ್ಬ ಹುಡುಗನ ಸುತ್ತುವರೆದು ಹೊಡೆದಾಡುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಮೇಲ್ನೋಟಕ್ಕೆ ಬಾಯ್ ಫ್ರೆಂಡ್ ಗೋಸ್ಕರ ಹೊಡೆದಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com