ಮತ್ತೊಂದು ಸ್ವಾಮಿ ಅತ್ಯಾಚಾರ ಪ್ರಕರಣ : ಮೈಸೂರಿನಲ್ಲಿ ಸಂತ್ರಸ್ತೆಯಿಂದ ದೂರು..!

ಪಾಂಡವಪುರ : ಚಾತುರ್ಮಾಸ ಪೂಜೆಗೆಂದು ಮನೆಗೆ ಬಂದ ವೇಳೆ ಸ್ವಾಮೀಜಿ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 
ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿರುವ ಅಪ್ಪಾಜಿ ಆಶ್ರಮದ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧವೇ ಅತ್ಯಾಚಾರದ ಆರೋಪ ಕೇಳಿಬಂದಿರುವುದು. ಮೈಸೂರಿನಲ್ಲಿ ತನ್ನ ಗಂಡನ ಮೂಲಕ ಮಹಿಳೆಗೆ ಸ್ವಾಮೀಜಿಯ ಪರಿಚಯವಾಗಿತ್ತು. ಈ ನಡುವೆ ಚಾತುರ್ಮಾಸ ಪೂಜೆ ಮಾಡಲು ಮನೆಗೆ ಸ್ವಾಮೀಜಿ ವಿದ್ಯಾಹಂಸ ಭಾರತಿ ಶ್ರೀಗಳು ಬಂದಾಗ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.


ಅತ್ಯಾಚಾರವೆಸಗಲು ತನ್ನ ಪತಿಯೇ ಸಹಕಾರ ನೀಡಿದ್ದಾರೆಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಈ ಕುರಿತು ಕುವೆಂಪು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com