ಶೀರೂರು ಶ್ರೀಗಳ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಕೊನೆಗೂ ಬಿತ್ತು ತೆರೆ…?

ಉಡುಪಿ : ಅನುಮಾನಗಳ ಗೂಡಾಗಿದ್ದ ಶೀರೂರು ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಸಂಶಯಾಸ್ಪದ ಸಾವಿನ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ . ಶೀರೂರು ಶ್ರೀಗಳದ್ದು ಸಹಜ ಸಾವು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ವೈದ್ಯರ ಅಂತಿಮ ವರದಿ ಸ್ಪಷ್ಟಪಡಿಸಿದೆ.

ಶಿರೂರು ಶ್ರೀ ಸಾವು ಗೆ ಚಿತ್ರದ ಫಲಿತಾಂಶ

ಜು.19ರಂದು ಶ್ರೀಗಳ ಸಾವಿಗೆ ಸಂಬಂಧಿಸಿ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದು,  ಶ್ರೀಗಳದ್ದು ಸಹಜ, ಸಾವು, ಅಥವಾ ಅವರನ್ನು ಬೇಕಂತನೇ ಸಾಯಿಸಿದ್ದಾರೋ ಎಂಬ ಅನುಮಾನಗಳಿಗೆ ತೆರೆಬಿದ್ದಿದ್ದು,  ಜು.30ರಂದು ನೀಡಿದ ಮರಣೋತ್ತರ ವರದಿ ಹಾಗೂ ಆ.18ರಂದು ದೊರೆತ ಎಫ್‌ಎಸ್‌ಎಲ್‌ ವರದಿಯನ್ನು ತಾಳೆ ಹಾಕಿದ ಮಣಿಪಾಲ ಕೆಎಂಸಿ ವೈದ್ಯರು ಶೀರೂರು ಶ್ರೀಗಳು ಅನ್ನನಾಳದ ರಕ್ತಸ್ರಾವ ಹಾಗೂ ಕೋನ್ನಿಕ್‌ ಲಿವರ್‌ ಸಿರಾಸಿಸ್‌ನಿಂದ ಮೃತರಾಗಿದ್ದಾರೆ. ದೇಹದಲ್ಲಿ ಯಾವುದೇ ವಿಷ ಅಂಶ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಶಿರೂರು ಶ್ರೀ ಸಾವು ಗೆ ಚಿತ್ರದ ಫಲಿತಾಂಶ

ಶ್ರೀಗಳ ದೇಹದ ಅಂಗಾಂಗವನ್ನು ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮರಣೋತ್ತರ ಹಾಗೂ ಎಫ್‌ಎಸ್‌ಎಲ್‌ ವರದಿಗಳೆರಡರಲ್ಲೂ ಶೀರೂರು ಶ್ರೀಗಳದ್ದು ಸಹಜ ಸಾವು ಎನ್ನುವ ಉಲ್ಲೇಖವಿದ್ದರೂ, ಮರಣೋತ್ತರ ವರದಿ ಕೊಟ್ಟಿರುವ ಮಣಿಪಾಲ ವೈದ್ಯರ ಅಂತಿಮ ವರದಿಯೇ ಪ್ರಕರಣಕ್ಕೆ ಬಹಳ ಮುಖ್ಯವಾಗಿತ್ತು. ಎರಡೂ ವರದಿಗಳನ್ನು ತಾಳೆ ಹಾಕಿದ ವೈದ್ಯರು ಕೊನೆಗೂ ಅಂತಿಮ ವರದಿ ಕೊಟ್ಟು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಇನ್ನೂ ಅಂತಿಮ ವರದಿ ಜಿಲ್ಲಾ ಪೊಲೀಸರ ಕೈಗೆ ಬಂದಿದ್ದು, ಶುಕ್ರವಾರ ಪ್ರಕರಣದ ತನಿಖಾಧಿಕಾರಿ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಭೂ ಬಾಲನ್‌ ಅವರಿಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com